ಕೋಲ್ಕತ್ತಾ(ಪಶ್ಚಿಮ ಬಂಗಾಳ):ಬರುವ ಸೆಪ್ಟೆಂಬರ್ 30 ರಂದು ನಡೆಯಲಿರುವ ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದು, ಅವರ ಎದುರಾಳಿಯಾಗಿ ಭಾರತೀಯ ಜನತಾ ಪಾರ್ಟಿಯಿಂದ ಪ್ರಿಯಾಂಕಾ ಟಿಬ್ರೆವಾಲ್ ಕಣಕ್ಕಿಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಅದರಲ್ಲಿ ತಮ್ಮ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇದರ ಪ್ರಕಾರ ಬಿಜೆಪಿಯ ಪ್ರಿಯಾಂಕಾ ಅತಿ ಶ್ರೀಮಂತ ಅಭ್ಯರ್ಥಿ ಎಂದು ತಿಳಿದು ಬಂದಿದೆ.
ಇತ್ತೀಚಿನ ಅಫಿಡವಿಟ್ ಪ್ರಕಾರ ಪ್ರಿಯಾಂಕಾ ವಾರ್ಷಿಕ ಆದಾಯ 10,35,235 ರೂ. ಆಗಿದ್ದು, ಇದರಲ್ಲಿ 3,04,189 ರೂ. ನಗದು ರೂಪದಲ್ಲಿ ಬರುತ್ತದೆ. ಐದು ಬ್ಯಾಂಕ್ ಖಾತೆ ಹೊಂದಿರುವ ಅವರು, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟು ಸ್ಥಿರಾಸ್ತಿ ಮೌಲ್ಯ 82,31,222 ಆಗಿದೆ. 15,79,969 ರೂ. ಮೌಲ್ಯದ ಸ್ಕಾರ್ಪಿಯೋ ಕಾರು ಹೊಂದಿದ್ದು, ಇದರ ಜೊತೆಗೆ 13 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ ಮತ್ತು ವಜ್ರದ ಆಭರಣ ಹೊಂದಿದ್ದಾರೆ. ಇದರ ಜೊತೆಗೆ 34,000 ಸಾವಿರ ರೂ. ಮೌಲ್ಯದ ಐದು ಚಿನ್ನದ ನಾಣ್ಯ ಹಾಗೂ 50 ಸಾವಿರ ರೂ. ಮೌಲ್ಯದ 20 ಬೆಳ್ಳಿ ನಾಣ್ಯಗಳಿವೆ. ಇದರ ಜೊತೆಗೆ 35 ಲಕ್ಷ ರೂ. ಸಾಲ ಇದೆ.