ಬಿಜ್ನೋರ್ (ಉತ್ತರ ಪ್ರದೇಶ): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಫೆಬ್ರವರಿ 15ರಂದು ಉತ್ತರಪ್ರದೇಶದ ಬಿಜ್ನೋರ್ ಹಾಗೂ ಮೀರತ್ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಭೇಟಿ ವೇಳೆ ಕಿಸಾನ್ ಮಹಾ ಪಂಚಾಯತ್ನಲ್ಲಿ ಪಾಲ್ಗೊಂಡು, ರೈತ ಕುಟುಂಬಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೊನ್ನೆ ಬುಧವಾರ ಸಹರಾನ್‌ಪುರಕ್ಕೆ ಭೇಟಿ ನೀಡಿದ್ದ ಕೈ ನಾಯಕಿ, ಕಿಸಾನ್ ಮಹಾ ಪಂಚಾಯತ್ನಲ್ಲಿ ರೈತರನ್ನುದ್ದೇಶಿಸಿ ಭಾಷಣ ಮಾಡಿದ್ದರು. ಕೋಟ್ಯಧಿಪತಿಗಳಿಗೆ ಸಹಾಯ ಮಾಡಲೆಂದು ಕೃಷಿ ಕಾನೂನುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದರು.