ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರ ಕೋವಿಡ್ ದತ್ತಾಂಶವನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ : ಪ್ರಿಯಾಂಕಾ ಗಾಂಧಿ ಆರೋಪ

ಕೇಂದ್ರ ಸರ್ಕಾರ ಕೋವಿಡ್ ಸಂಬಂಧಿ ದತ್ತಾಂಶಗಳನ್ನ ಹತ್ತಿಕ್ಕುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕಾ, ಸಾಮಾಜಿಕ ಜಾಲತಾಣವನ್ನು ಬಿಜೆಪಿ ಪ್ರಚಾರ ಸಾಧನವಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ..

priyanka-gandhi
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

By

Published : Jun 8, 2021, 5:16 PM IST

ನವದೆಹಲಿ :ಕೋವಿಡ್ ಸಂಬಂಧಿ ಅಂಕಿ-ಅಂಶಗಳಲ್ಲಿ ಸರ್ಕಾರ ತಪ್ಪು ಎಸಗುತ್ತಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್​ ಸಾವಿನ ಕುರಿತು ಸರ್ಕಾರದ ಅಂಕಿ-ಅಂಶಗಳು ಮತ್ತು ಶವಾಗಾರದಲ್ಲಿನ ಅಂಕಿ-ಅಂಶಗಳ ನಡುವೆ ಏಕೆ ಅಂತಹ ವ್ಯತ್ಯಾಸವಿದೆ? ಎಂದು ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರವು ಕೋವಿಡ್ ಹರಡುವುದು ತಡೆಯುವ ಮತ್ತು ಜಾಗೃತಿ ಕಾರ್ಯದ ಬದಲು ದತ್ತಾಂಶವನ್ನು ಪ್ರಚಾರದ ಸಾಧನವನ್ನಾಗಿ ಏಕೆ ಬಳಸುತ್ತಿದೆ? ಎಂದು ಜಿಮ್ಮೇದಾರ್ ಕೌನ್​ (ಜವಾಬ್ದಾರಿ ಯಾರು) ಎಂಬ ಹ್ಯಾಶ್​​ಟ್ಯಾಗ್ ಬಳಿಸಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್ ಸಂಬಂಧಿ ದತ್ತಾಂಶಗಳನ್ನ ಹತ್ತಿಕ್ಕುತ್ತಿದೆ ಎಂದು ಆರೋಪಿಸಿರುವ ಪ್ರಿಯಾಂಕಾ, ಸಾಮಾಜಿಕ ಜಾಲತಾಣವನ್ನು ಬಿಜೆಪಿ ಪ್ರಚಾರ ಸಾಧನವಾಗಿ ಬಳಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ಆರಂಭದಿಂದಲೂ ಮೋದಿ ಸರ್ಕಾರ ಕೋವಿಡ್ ಅಂಕಿ-ಅಂಶಗಳನ್ನು ಕೋವಿಡ್ ಹರಡದಂತೆ ತಡೆಯುವ ಸಾಧನವಾಗಿ ಬಳಸದೆ, ಕೇವಲ ಪ್ರಚಾರಕ್ಕಾಗಿ ಬಳಿಸಿದೆ ಎಂದು ಆರೋಪಿಸಿದ್ದಾರೆ.

ಓದಿ:ಅಮಿತ್​ ಶಾ ಭೇಟಿ ಮಾಡಿದ ಸುವೇಂದು ಅಧಿಕಾರಿ: ಪಶ್ಚಿಮ ಬಂಗಾಳ ಹಿಂಸಾಚಾರ ಕುರಿತು ಚರ್ಚೆ

ABOUT THE AUTHOR

...view details