ನವದೆಹಲಿ: ವಸಂತ ಪಂಚಮಿ ಆಚರಣೆ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನೆನೆದು ಪೋಸ್ಟ್ ಮಾಡಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ವಸಂತ ಪಂಚಮಿಯಂದು ಅಜ್ಜಿ ಶಾಲೆಗೆ ಹೊರಡುತ್ತಿದ್ದ ಸಹೋದರ ರಾಹುಲ್ ಗಾಂಧಿಯವರ ಜೇಬಿನಲ್ಲಿ ಹಳದಿ ಬಣ್ಣದ ಕರವಸ್ತ್ರವನ್ನು ಇಟ್ಟು ಕಳುಹಿಸುತ್ತಿದ್ದರು ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ವಸಂತ ಪಂಚಮಿಯಂದು ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮನೆಯನ್ನು ಹೂವಿನಿಂದ ಅಲಂಕರಿಸುತ್ತಿದ್ದರು ಎಂದು ಸಹ ನೆನೆದಿದ್ದಾರೆ.
ವಂಸತ ಪಂಚಮಿಯ ಸಂದರ್ಭದಲ್ಲಿ, ನನ್ನ ಅಜ್ಜಿ ಇಂದಿರಾ ಜಿ ಶಾಲೆಗೆ ಹೋಗುವ ಮೊದಲು ನಮ್ಮಿಬ್ಬರ ಜೇಬಿನಲ್ಲಿ ಹಳದಿ ಕರವಸ್ತ್ರ ಹಾಕುತ್ತಿದ್ದರು. ಇಂದಿಗೂ ಈ ಸಂಪ್ರದಾಯವನ್ನು ಮುಂದುವರೆಸುತ್ತಾ ನನ್ನ ತಾಯಿ ಸಾಸಿವೆ ಹೂಗಳನ್ನು ಕೇಳುತ್ತಾರೆ ಮತ್ತು ವಸಂತ ಪಂಚಮಿಯ ದಿನದಂದು ಅವುಗಳನ್ನು ಅಲಂಕರಿಸುತ್ತಾರೆ. ಜ್ಞಾನದ ದೇವತೆಯಾದ ಸರಸ್ವತಿ ದೇವಿಯು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನಿಮ್ಮೆಲ್ಲರಿಗೂ ವಸಂತ ಪಂಚಮಿ ಶುಭಾಶಯಗಳು ಎಂದು ಟ್ವಿಟರ್ನಲ್ಲಿ ಹಳೆಯ ನೆನಪು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ:ಟೂಲ್ಕಿಟ್ ವಿವಾದದಲ್ಲಿ ದಿಶಾ ರವಿ ಬಂಧನ:ದೆಹಲಿ ಪೊಲೀಸ್ಗೆ ಮಹಿಳಾ ಆಯೋಗ ನೋಟಿಸ್..!