ಪ್ರಯಾಗರಾಜ್ (ಉತ್ತರ ಪ್ರದೇಶ): ಯುಪಿ ಉಸ್ತುವಾರಿ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಯಾಗರಾಜ್ ತಲುಪಿದ್ದು, ಕಾಂಗ್ರೆಸ್ ಹಿರಿಯ ಮುಖಂಡರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಸ್ವಾಗತಿಸಿದ್ದಾರೆ.
ಪ್ರಯಾಗರಾಜ್ ತಲುಪಿದ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಗಾಂಧಿಗೆ ವಂದಿಸಿದರು. ಪ್ರಿಯಾಂಕಾ ಗಾಂಧಿ, ಪ್ರಯಾಗರಾಜ್ನಲ್ಲಿ ಮೌನಿ ಅಮಾವಾಸ್ಯೆ ದಿನದ ಸಲುವಾಗಿ ಪುಣ್ಯಸ್ನಾನ ಮಾಡಲಿದ್ದಾರೆ. ಜೊತೆಗೆ ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿಯ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ.
ಈ ಸುದ್ದಿಯನ್ನೂ ಓದಿ:ಸವಾಲಿನ ಕಾರ್ಯಾಚರಣೆಗಾಗಿ ಭಾರತೀಯ ಸೈನಿಕರಿಗೆ ತರಬೇತಿ..!
ಈಟಿವಿ ಭಾರತದ ವರದಿಗಾರ ಸೇರಿದಂತೆ ಮಾಧ್ಯಮ ವ್ಯಕ್ತಿಗಳು ಪ್ರಿಯಾಂಕಾ ಗಾಂಧಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದು, ಅವರು ಯಾರಿಗೂ, ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇನ್ನೂ ಸಂಜೆ 4 ಗಂಟೆಗೆ ದೆಹಲಿಗೆ ಮರಳಲಿದ್ದಾರೆ. ಈ 4 ಗಂಟೆಗಳ ಅವಧಿಯಲ್ಲಿ ಪ್ರಿಯಾಂಕಾ ಗಾಂಧಿ ತಮ್ಮ ಪೂರ್ವಜರ ಮನೆಗೆ ಹೋಗುವುದಲ್ಲದೇ, ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ. ಜೊತೆಗೆ ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿಯ ಆಶೀರ್ವಾದವನ್ನೂ ಪಡೆಯಲಿದ್ದಾರೆ.