ಕರ್ನಾಟಕ

karnataka

ETV Bharat / bharat

ಮಾಯಾವತಿ ತಾಯಿ ಸಾವು : ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಿಯಾಂಕಾ ಗಾಂಧಿ - ನವದೆಹಲಿ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಅವರನ್ನು ಭೇಟಿಯಾಗಿ ಅವರ ತಾಯಿಯ ಸಾವಿಗೆ ಸಾಂತ್ವನ ಹೇಳಿದರು..

ಮಾಯಾವತಿ ತಾಯಿ ಸಾವು
ಮಾಯಾವತಿ ತಾಯಿ ಸಾವು

By

Published : Nov 14, 2021, 8:52 PM IST

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ( Priyanka Gandhi Vadra ) ಅವರು ದೆಹಲಿಯ ತ್ಯಾಗರಾಜ್ ಮಾರ್ಗ್-3ನಲ್ಲಿ ಬಹುಜನ ಸಮಾಜ ಪಕ್ಷದ(Bahujan Samaj Party) (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ (Mayawati) ಅವರನ್ನು ಭೇಟಿ ಮಾಡಿ ಅವರ ತಾಯಿಯ ಸಾವಿಗೆ ಸಾಂತ್ವನ ಹೇಳಿದರು.

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ತಾಯಿ ಶನಿವಾರ ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮಾಯಾವತಿಯವರ ತಾಯಿ ರಾಮರತಿ(Ramrati) ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಬಿಎಸ್‌ಪಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಿಯಾಂಕಾ ಅವರು ಟ್ವೀಟ್ ಕೂಡ ಮಾಡಿದ್ದರು. ಸಾವಿನ ಸುದ್ದಿ ಕೇಳಿ ದುಃಖವಾಯಿತು. ದೇವರು ಅವರ ಪಾದದಲ್ಲಿ ಸ್ಥಾನ ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ನೋವನ್ನು ಭರಿಸುವ ಧೈರ್ಯವನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದರು.

ABOUT THE AUTHOR

...view details