ರಣಥಂಬೋರ್(ರಾಜಸ್ಥಾನದ):ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ರಣಥಂಬೋರ್‌ನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಲಿದ್ದಾರೆ. ಇದಕ್ಕಾಗಿ ಅವರು ಕುಟುಂಬ ಸಮೇತ ರಣಥಂಬೋರ್‌ನಲ್ಲಿ ಬೀಡು ಬಿಟ್ಟಿದ್ದಾರೆ.
ಪ್ರಿಯಾಂಕಾ ಗಾಂಧಿ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ವೀಕ್ಷಿಸಲು ಆಗಾಗ ಭೇಟಿ ನೀಡುತ್ತಿರುತ್ತಾರೆ. ಕುಟುಂಬದೊಂದಿಗೆ ಇಲ್ಲಿ ಹೆಚ್ಚಿನ ಸಮಯವನ್ನು ಅವರು ಕಳೆಯುತ್ತಾರೆ. ಅವರ ಪತಿ ರಾಬರ್ಟ್ ವಾದ್ರಾ ಕೂಡ ಅವರೊಂದಿಗೆ ಹಾಜರಿದ್ದರು.
ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ:
ಪ್ರಿಯಾಂಕಾ ಅವರು ಕುಟುಂಬ ಸಮೇತ ರಣಥಂಬೋರ್ ಹುಲಿ ಸಂರಕ್ಷಿತ ಪ್ರದೇಶ ವಲಯ 4ರ ಅರಣ್ಯಕ್ಕೆ ಭೇಟಿ ನೀಡಿ ಹುಲಿ ವೀಕ್ಷಿಸಿದರು.
ವಿಶೇಷ ಅತಿಥಿಗಳ ಸಮ್ಮುಖದಲ್ಲಿಹುಟ್ಟುಹಬ್ಬ ಆಚರಣೆ:
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ತಮ್ಮ ಹುಟ್ಟುಹಬ್ಬವನ್ನು ಶೇರ್ ಬಾಗ್ ಹೋಟೆಲ್ನಲ್ಲಿ ಆಚರಿಕೊಂಡರು. ಈ ವೇಳೆ, ಹೋಟೆಲ್ ನಿರ್ವಾಹಕ ಜೈಸಲ್ ಸಿಂಗ್ ಅವರ ಕುಟುಂಬದವರೂ ಇದ್ದರು ಎನ್ನಲಾಗಿದೆ. ಉಭಯ ಕುಟುಂಬಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ರಾಜಕೀಯ ಜಂಜಡ ಬಿಟ್ಟು ಕುಟುಂಬದೊಂದಿಗೆ ರಣಥಂಬೋರ್ಗೆ ತೆರಳಿದ ಪ್ರಿಯಾಂಕಾ ವಾದ್ರಾ