ನವದೆಹಲಿ: ದೇಶದಾದ್ಯಂತ ಎಲ್‌ಪಿಜಿ ಹಾಗೂ ಇಂಧನ ಬೆಲೆ ಏರಿಕೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ದೇಶೀಯ ಎಲ್ಪಿಜಿಯ ಬೆಲೆ 200 ರೂ.ಗಳಷ್ಟು ಹೆಚ್ಚಾಗಿದ್ದು, ಪೆಟ್ರೋಲ್, ಡೀಸೆಲ್ ದರ 100ಕ್ಕೆ ತಲುಪುತ್ತಿದೆ. ಮೋದಿ ಸರ್ಕಾರವು ತಮ್ಮ ಬಿಲಿಯನೇರ್ ಸ್ನೇಹಿತರ ಹಿತಕ್ಕಾಗಿ ಮಾಡುತ್ತಿರುವ ಕಾರ್ಯದಿಂದಾಗಿ ಸಾಮಾನ್ಯ ಜನರು ಬಳಲುವಂತಾಗಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.