ನವದೆಹಲಿ:ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಟ್ವಿಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ಕೆಲ ತಿಂಗಳಿಂದ ವ್ಯಾಪಾರವಿಲ್ಲದೇ ಜನರ ಬಳಿ ಗ್ಯಾಸ್ ತುಂಬಿಸಿಕೊಳ್ಳಲು ಹಣವಿಲ್ಲ. ಮಹಿಳೆಯರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಅವರ ನೋವಿನ ಬಗ್ಗೆ ಯಾವಾಗ ಮಾತನಾಡುವುದು? ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಜನಸಾಮಾನ್ಯರು ಹೇಳಿಕೊಂಡಿರುವ ಕಷ್ಟದ ಮಾತುಗಳ ವಿಡಿಯೋ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಮೋದಿ ಸರ್ಕಾರ ಆಗಸ್ಟ್ 10ರಂದು ಬಡವರಿಗೋಸ್ಕರ ಪಿಎಂ ಉಜ್ವಲ ಯೋಜನೆ 2.0 ಜಾರಿಗೊಳಿಸಿದ್ದು, ಇದರ ಮೂಲಕ ದೇಶದ ಬಡವರಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗುತ್ತಿದೆ.