ಕೋಲ್ಕತ್ತಾ: ರಾಜ್ಯದಲ್ಲಿ ಖಾಸಗಿ ಟ್ಯೂಷನ್ ಹಾವಳಿ ಮಿತಿಮೀರಿದೆ. ಸರ್ಕಾರಿ ಉದ್ಯೋಗ ಹೊಂದಿರುವ ಹಲವಾರು ಶಿಕ್ಷಕರ ವಿರುದ್ಧ ಆರೋಪ ಕೇಳಿಬಂದಿದೆ. ಖಾಸಗಿ ಶಿಕ್ಷಕರ ಸಂಘವು ಈ ವಿಷಯದ ವಿರುದ್ಧ ಸಾಕಷ್ಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಶಿಕ್ಷಣ ಇಲಾಖೆ ಜೂನ್ 27 ರಂದು ಹೊಸ ಆದೇಶ ಹೊರಡಿಸಿದೆ. ಖಾಸಗಿ ಶಿಕ್ಷಣ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸುವ ಸರ್ಕಾರಿ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಖಾಸಗಿ ಶಿಕ್ಷಕರು ಸಂತಸಗೊಂಡಿದ್ದಾರೆ. ಈ ಸಂಬಂಧ ಖಾಸಗಿ ಬೋಧಕ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹೀರಾಲಾಲ್ ಮಂಡಲ್ ಮಾತನಾಡಿ, ಈ ಅಕ್ರಮದ ವಿರುದ್ಧ ನಾವು ಧ್ವನಿ ಎತ್ತುತ್ತಿದ್ದೆವು. ಅವರೆಲ್ಲಾ ಎರಡು ವರ್ಷಗಳ ಕಾಲ ಮನೆಯಲ್ಲಿ ಕೂತು ಸಂಬಳ ಪಡೆಯುತ್ತಿದ್ದರು. ಇದಲ್ಲದೆ ಹಲವರು ಆನ್‌ಲೈನ್‌ನಲ್ಲಿ ಖಾಸಗಿ ಟ್ಯೂಷನ್ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.