ಕರ್ನಾಟಕ

karnataka

ETV Bharat / bharat

ಮೊದಲ ಬಾರಿ ನಭಕ್ಕೆ ಜಿಗಿಯಲಿದೆ ಖಾಸಗಿ ಸಂಸ್ಥೆ ಸ್ಕೈರೂಟ್​ ಏರೋಸ್ಪೆಸ್​ ರಾಕೆಟ್​​

ಉಡಾವಣೆಗೊಳ್ಳುತ್ತಿರುವ ವಿಕ್ರಮ್ ಎಸ್ ರಾಕೆಟ್ ಏಕ - ಹಂತದ ಉಪ - ಕಕ್ಷೆಯ ಉಡಾವಣಾ ವಾಹನವಾಗಿದ್ದು, ಇದು ಮೂರು ಗ್ರಾಹಕ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ.

By

Published : Nov 8, 2022, 5:53 PM IST

ಮೊದಲ ಬಾರಿ ನಭಕ್ಕೆ ಜಿಗಿಯಲಿದೆ ಖಾಸಗಿ ಸಂಸ್ಥೆ ಸ್ಕೈರೂಟ್​ ಏರೋಸ್ಪೆಸ್​ ರಾಕೆಟ್​​
Private company Skyroot Aerospace rocket maker to fly its rocket

ಚೆನ್ನೈ: ಭಾರತದ ಖಾಸಗಿ ವಲಯದ ರಾಕೆಟ್​ ತಯಾರಿಕ ಸಂಸ್ಥೆ ಸ್ಕೈರೂಟ್​ ಏರೋಸ್ಪೆಸ್​ ತನ್ನ ವಿಕ್ರಂ-ಎಸ್​​ ಉಡಾವಣೆಗೆ ಮುಂದಾಗಿದೆ. ಇದೇ ನವೆಂಬರ್​ 12 ಮತ್ತು 16ರಂದು ಶ್ರೀಹರಿಕೋಟದಿಂದ ಇಸ್ರೋ ತನ್ನ ಮೂರು ಪೇಲೋಡ್​ಗಳ ಉಡಾವಣೆ ನಡೆಸಲಿದ್ದು, ಈ ವೇಳೆ ವಿಕ್ರಂ-ಎಸ್​ ಕೂಡ ನಭಕ್ಕೆ ಜಿಗಿಯಲಿದೆ.

ಉಡಾವಣೆಗೊಳ್ಳುತ್ತಿರುವ ವಿಕ್ರಮ್-ಎಸ್ ರಾಕೆಟ್ ಏಕ-ಹಂತದ ಉಪ-ಕಕ್ಷೆಯ ಉಡಾವಣಾ ವಾಹನವಾಗಿದ್ದು, ಇದು ಮೂರು ಗ್ರಾಹಕ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ವಿಕ್ರಮ್ ಸರಣಿಯ ಬಾಹ್ಯಾಕಾಶ ಉಡಾವಣಾ ವಾಹನಗಳಲ್ಲಿನ ಹೆಚ್ಚಿನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ.

ನಾವು ಉಡಾವಣೆಗಾಗಿ ಶ್ರೀಹರಿಕೋಟಾದ ಇಸ್ರೋದ ಬಾಹ್ಯಾಕಾಶ ನಿಲ್ದಾಣದಲ್ಲಿ ವಿಶ್ವದರ್ಜೆಯ ಉಡಾವಣಾ ಮೂಲಸೌಕರ್ಯ ಬಳಸುತ್ತಿದ್ದೇವೆ ಎಂದು ಸ್ಕೈರೂಟ್​​ ಏರೋಸ್ಪೆಸ್​​ ಸಹ ಸಂಸ್ಥಾಪಕ ನಾಗಾ ಭಾರತ್​ ಡಾಕಾ ತಿಳಿಸಿದ್ದಾರೆ.

ಹೈದರಾಬಾದ್​ ಮೂಲದ ರಾಕೆಟ್​ ಸ್ಪಾರ್ಟ್​ಅಪ್​ ತನ್ನ ಯೋಜನೆಗೆ ಪ್ರಾರಂಭ ಎಂದು ಹೆಸರಿಟ್ಟಿದೆ. ಇದು ಖಾಸಗಿ ವೈಮಾನಿಕ ವಲಯದ ಹೊಸ ಯುಗ ಎನ್ನಲಾಗಿದೆ. ಸ್ಕೈರೂಟ್​​ ಏರೋಸ್ಪೆಸ್​ ಪ್ರಕಾರ, ಸಂಸ್ಥೆಯ ಮೊದಲ ಯೋಜನೆ ಇಸ್ರೋ ಮುಖ್ಯಸ್ಥ ಡಾ. ಎಸ್​ ಸೋಮನಾಥ್​​ ಅವರು ವೈಮಾನಿಕ ನಿಯಮಗಳ IN-SPACe ಹಾರಾಟಕ್ಕೆ ಅನುಮತಿ ನೀಡುವ ಮೂಲಕ ನಮ್ಮ ಯೋಜನೆ ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ.

ರಾಕೆಟ್​ ಉಡಾವಣೆ ನವೆಂಬರ್​​ 12 ಮತ್ತು 16 ಮಧ್ಯ ಅಧಿಕಾರಿಗಳು ತಿಳಿಸಲಿದ್ದಾರೆ. ಅಂತಿಮ ದಿನಾಂಕವನ್ನು ಹವಾಮಾನ ಪರಿಸ್ಥಿತಿ ಮೇಲೆ ನಿಗದಿಸಲಾಗುವುದು ಎಂದು ಸ್ಕೈರೂಟ್​​ ಏರೋಸ್ಪೆಸ್​ ತಿಳಿಸಿದೆ. ಈ ಮೂಲಕ ನಭಕ್ಕೆ ಜಿಗಿಯಲಿರುವ ಮೊದಲ ಖಾಸಗಿ ಆಂತರಿಕ್ಷ ಸಂಸ್ಥೆ ಸ್ಕೈರೂಟ್​ ಏರೋಸ್ಪೆಸ್ ಆಗಿದೆ​​.

ಕಡಿಮೆ ಅವಧಿಯಲ್ಲಿ ಇಸ್ರೋ ಮತ್ತು ಇನ್​-ಸ್ಪೆಕ್ ಅದ್ಬುತ ಬೆಂಬಲದಿಂದ ನಾವು ವಿಕ್ರಂ-ಎಸ್​ ರಾಕೆಟ್​ ಯೋಜನೆಯನ್ನು ಸಿದ್ದ ಪಡಿಸಲಾಯಿತು. ಡಾ ವಿಕ್ರಂ ಸಾರಾಬಾಯಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅದಕ್ಕೆ ವಿಕ್ರಮ್​ ಎಂದು ಹೆಸರಿಸಲಾಗಿದೆ ಎಂದು ಸಹ ಸಂಸ್ಥಾಪಕರ ಪವನ್​ ಕುಮಾರ್​ ಚಂದನ್​ ತಿಳಿಸಿದರು.

ಇದನ್ನೂ ಓದಿ: ಉಪಗ್ರಹ ಉಡಾವಣಾ ಹೊಣೆ ಎನ್​ಎಸ್​ಐಎಲ್​ಗೆ ವರ್ಗ: ಇಸ್ರೋ

ABOUT THE AUTHOR

...view details