ಕರ್ನಾಟಕ

karnataka

ETV Bharat / bharat

ಜೈಲಿನಲ್ಲಿ ಶಾಲೆ, ಯೋಗಾಭ್ಯಾಸ: ಕೈದಿಗಳ ಮನಪರಿವರ್ತನೆಗೆ ಹೊಸ ವಿಧಾನ - ಉತ್ತರಾಖಂಡದ ಮಾದರಿ ಜೈಲು

ಹರಿದ್ವಾರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಶಿಕ್ಷಣ ಮತ್ತು ಯೋಗಾಸನಗಳನ್ನು ಹೇಳಿಕೊಡಲಾಗುತ್ತಿದೆ.

ಜೈಲು ಕೈದಿಗಳಿಗೆ ಶಿಕ್ಷಣ, ಯೋಗಾಭ್ಯಾಸ
ಜೈಲು ಕೈದಿಗಳಿಗೆ ಶಿಕ್ಷಣ, ಯೋಗಾಭ್ಯಾಸ

By

Published : Jun 8, 2022, 4:05 PM IST

Updated : Jun 8, 2022, 4:27 PM IST

ಹರಿದ್ವಾರ(ಉತ್ತರಾಖಂಡ): ಕೋಪ, ಅಜ್ಞಾನದಿಂದ ಅಪರಾಧದಲ್ಲಿ ತೊಡಗಿ ಜೈಲು ಪಾಲಾಗಿರುವ ಕೈದಿಗಳಿಗೆ ಉತ್ತರಾಖಂಡದ ಕಾರಾಗೃಹ ಅಧಿಕಾರಿಗಳು ಶಿಕ್ಷಣ, ಯೋಗ ಕಲಿಸಿ ಮನಪರಿವರ್ತಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೈದಿಗಳನ್ನು ಹೊಸ ದಿಕ್ಕಿನತ್ತ ತಿರುಗಿಸಲು ಜೈಲಿನಲ್ಲೇ ಶಾಲೆಯನ್ನೂ ನಡೆಸಲಾಗುತ್ತಿದೆ ಎಂಬುದು ವಿಶೇಷ.

ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಶಿಕ್ಷೆ ವಿಧಿಸುವ ಬದಲಾಗಿ ಅಕ್ಷರಾಭ್ಯಾಸ ನಡೆಯುತ್ತಿದೆ. ಇದಲ್ಲದೇ ದಿನನಿತ್ಯ ಯೋಗ ತರಗತಿಗಳನ್ನೂ ಆಯೋಜಿಸಲಾಗುತ್ತಿದೆ. ಇದರಿಂದ ಕೈದಿಗಳು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ.


ಜಿಲ್ಲಾಡಳಿತದಿಂದ ಪ್ರತಿದಿನ ಬೆಳಗ್ಗೆ 6 ರಿಂದ 7ರವರೆಗೆ ಯೋಗಾಸನ ನಡೆಯುತ್ತಿದೆ. ಯೋಗ ತರಗತಿಗಳಿಗಾಗಿ ಪತಂಜಲಿಯಿಂದ ಬೋಧಕರನ್ನು ಕರೆಸಲಾಗುತ್ತಿದೆ. ಪ್ರತಿದಿನ ನಡೆಯುವ ಯೋಗ ತರಗತಿಯಲ್ಲಿ ಎಲ್ಲ ಕೈದಿಗಳು ಭಾಗವಹಿಸುತ್ತಿದ್ದಾರೆ. ಯೋಗ ಕಲಿತ ಕೈದಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ.

ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಅಧ್ಯಯನ ಮಾಡಲು ಬಯಸುವ ಕೈದಿಗಳಿಗೆ ವಿಶೇಷ ತರಗತಿಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ತಮಗೆ ಬೇಕಾದ ವಿಷಯವನ್ನು ಅವರು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ವಿಶೇಷ ತರಗತಿಯಲ್ಲಿ 70ಕ್ಕೂ ಹೆಚ್ಚು ಕೈದಿಗಳು ಭಾಗವಹಿಸುತ್ತಿದ್ದಾರೆ. ಶಾಲೆಯು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಕೊನೆಗೊಳ್ಳುತ್ತದೆ. ಇದಕ್ಕಾಗಿ ಹೊರಗಿನಿಂದ ಶಿಕ್ಷಕರನ್ನು ಕರೆಸಲಾಗುತ್ತದೆ.

ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳನ್ನು ಬದಲಿಸಿ ಉತ್ತಮರನ್ನಾಗಿ ರೂಪಿಸುವುದೇ ಇದರ ಹಿಂದಿನ ಉದ್ದೇಶ ಎಂದು ಹರಿದ್ವಾರ ಜಿಲ್ಲಾ ಕಾರಾಗೃಹದ ಹಿರಿಯ ಜೈಲು ಅಧೀಕ್ಷಕ ಮನೋಜ್ ಕುಮಾರ್ ಆರ್ಯ ತಿಳಿಸಿದರು.

ಇದನ್ನೂ ಓದಿ:ಹಳೆ ದ್ವೇಷ.. ತಮ್ಮನ ಎದುರೇ ಅಣ್ಣ ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಂದ ಕ್ರಿಮಿನಲ್​ಗಳು!

Last Updated : Jun 8, 2022, 4:27 PM IST

For All Latest Updates

ABOUT THE AUTHOR

...view details