ಫರೂಖಾಬಾದ್: ಐಪಿಎಲ್ ಸೌಂಡ್ ದೇಶದಲ್ಲಿ ಕಿಕ್ ಎಬ್ಬಿಸಿದ್ದು, ಫತೇಗಢ ಕೇಂದ್ರ ಕಾರಾಗೃಹದ ಕೈದಿಗಳು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಐಪಿಎಲ್ ವೀಕ್ಷಣೆಗೆ ಅವಕಾಶ ಕಲ್ಪಿಸುವಂತೆ ಜೈಲು ಹಕ್ಕಿಗಳ ಉಪವಾಸ ಸತ್ಯಾಗ್ರಹ - ಫತೇಘ ಖೈದಿಗಳ ಉಪವಾಸ ಸತ್ಯಾಗ್ರಹ
ಫತೇಗಢ ಕೇಂದ್ರ ಜೈಲಿನ ಖೈದಿಗಳು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಐಪಿಎಲ್ ವೀಕ್ಷಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಹಿರಿಯ ಜೈಲು ಅಧೀಕ್ಷಕ ಪ್ರಮೋದ್ ಕುಮಾರ್ ಶುಕ್ಲಾ ಅವರು ಇಲಾಖಾ ಸಭೆಗಾಗಿ ಲಖನೌಗೆ ತೆರಳಿದ್ದರು. ಮುಷ್ಕರದ ಮಾಹಿತಿ ಬಂದ ಕೂಡಲೇ ಹಿಂದಿರುಗಿ ಬಂದು ಕೈದಿಗಳೊಂದಿಗೆ ಮಾತನಾಡಿದರು. ಐಪಿಎಲ್ ವೀಕ್ಷಣೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಕೈದಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಕಾಯಿಲೆ ಹಿನ್ನೆಲೆ, ರಾಜ್ಯದ ಎಲ್ಲಾ ಜಿಲ್ಲೆಗಳ ಜೈಲಿನಲ್ಲಿರುವ ಕೈದಿಗಳಿಗೆ ಮನರಂಜನಾ ಸೌಲಭ್ಯ ಒದಗಿಸುವಂತೆ ಸರ್ಕಾರ ನಿರ್ದೇಶಿಸಿತ್ತು. ಅದಕ್ಕಾಗಿ, ಬ್ಯಾರಕ್‌ಗಳಲ್ಲಿ ಸ್ಪೀಕರ್ ಅಳವಡಿಸಲಾಗಿದೆ. ಸದ್ಯ ಐಪಿಎಲ್ ಶುರುವಾಗಿದ್ದು, ಫತೇಗಢ ಕೇಂದ್ರ ಜೈಲಿನ ಕೈದಿಗಳು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಐಪಿಎಲ್ ವೀಕ್ಷಣೆಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಹಿರಿಯ ಜೈಲು ಅಧೀಕ್ಷಕ ಪ್ರಮೋದ್ ಕುಮಾರ್ ಶುಕ್ಲಾ ಅವರು ಇಲಾಖಾ ಸಭೆಗಾಗಿ ಲಖನೌ ಗೆ ತೆರಳಿದ್ದರು. ಮುಷ್ಕರದ ಮಾಹಿತಿ ಬಂದ ಕೂಡಲೇ ಹಿಂದಿರುಗಿ ಬಂದು ಕೈದಿಗಳೊಂದಿಗೆ ಮಾತನಾಡಿ ಐಪಿಎಲ್ ವೀಕ್ಷಣೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.