ಲಖಿಂಪುರಖೇರಿ (ಉತ್ತರ ಪ್ರದೇಶ): ಪ್ರಾಂಶುಪಾಲರು ಮಹಿಳಾ ಶಿಕ್ಷಕಿಯನ್ನು ಸಾರ್ವಜನಿಕವಾಗಿ ಶೂನಿಂದ ಥಳಿಸಿದ್ದಾರೆ. ಲಖಿಂಪುರ ಬ್ಲಾಕ್‌ನ ಮಹಾಂಗುಖೇಡಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಿಕ್ಷಕಿಯನ್ನು ಈ ರೀತಿ ಥಳಿಸಿದ್ದರಿಂದ ಶಿಕ್ಷಾಮಿತ್ರ ಸಂಘಟನೆ ಸಿಟ್ಟಿಗೆದ್ದಿದ್ದು, ಕ್ರಮ ಜರುಗಿಸುವಂತೆ ಒತ್ತಾಯಿಸಿದೆ. ಘಟನೆ ಸಂಬಂಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಾಂಶುಪಾಲರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಇದರ ನಡುವೆ ಆರೋಪಿ ಪ್ರಾಂಶುಪಾಲರು ಮತ್ತು ಸಂತ್ರಸ್ತ ಮಹಿಳೆ ಇಬ್ಬರೂ ದೂರು ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.