ಪುಣೆ: ಬಿಜೆಪಿ ಕಾರ್ಯಕರ್ತರು ಮಹಾರಾಷ್ಟ್ರದ ಪುಣೆಯಲ್ಲಿ ಕೆಲವು ದಿನಗಳ ಹಿಂದೆ ನರೇಂದ್ರ ಮೋದಿಯವರ ದೇವಸ್ಥಾನವನ್ನು ನಿರ್ಮಿಸಿದ್ದರು. ಆದರೆ ಈಗ ದೇವಸ್ಥಾನದಿಂದ ಪ್ರಧಾನಿಯ ವಿಗ್ರಹವನ್ನು ತೆರವುಗೊಳಿಸಲಾಗಿದೆ.
ಪುಣೆಯ 'ಮೋದಿ ದೇವಾಲಯ'ದಲ್ಲಿದ್ದ ಪ್ರಧಾನಿ ಮೋದಿ ವಿಗ್ರಹ ತೆರವು - ಮಹಾರಾಷ್ಟ್ರ
ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಯ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನಿ ಮೋದಿ ಅವರ ದೇವಾಲಯ ಕಟ್ಟಿ ಅದರಲ್ಲಿ ನಮೋ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು.
ಪುಣೆಯಲ್ಲಿರುವ ನಮೋ ದೇವಾಲಯದಲ್ಲಿದ್ದ ಪ್ರಧಾನಿ ಮೋದಿ ಅವರ ವಿಗ್ರಹ ತೆರವು..!
ಏತನ್ಮಧ್ಯೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರು ಗುರುವಾರ ಇಲ್ಲಿನ ಔಂದ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು. ವಿಗ್ರಹ ತೆರವು ಬಳಿಕ ಎನ್‌ಸಿಪಿಯ ನಗರ ಘಟಕದ ಮುಖ್ಯಸ್ಥ ಪ್ರಶಾಂತ್ ಜಗ್ತಾಪ್ ಮಾತನಾಡಿ, ಇಂಧನ ಬೆಲೆಗಳು ಕಡಿಮೆಯಾಗುತ್ತವೆ, ಹಣದುಬ್ಬರ ಕಡಿಮೆಯಾಗುತ್ತದೆ ಮತ್ತು ಜನರ ಖಾತೆಗಳಿಗೆ 15 ಲಕ್ಷ ರೂಪಾಯಿಗಳು ಬರುತ್ತವೆ ಎಂದು ಮೋದಿ ಪೊಳ್ಳು ಭರವಸೆ ನೀಡಿದ್ದರು. ಇಂತಹ ದೇವಾಲಯದ ನಿರ್ಮಾಣವು ಬೌದ್ಧಿಕ ದಿವಾಳಿತನದ ಸಂಕೇತ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪುಣೆಯಲ್ಲಿ ನಿರ್ಮಾಣವಾಯ್ತು ಪ್ರಧಾನಿ ಮೋದಿ ದೇವಸ್ಥಾನ
ಪ್ರಧಾನಿಯಾದ ನಂತರ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆರ್ಟಿಕಲ್ 370 ರದ್ದು, ರಾಮ ಮಂದಿರ ನಿರ್ಮಾಣ ಮತ್ತು ತ್ರಿವಳಿ ತಲಾಕ್ ರದ್ದುಗಳಂತಹ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೇಗುಲ ನಿರ್ಮಾತೃ ಮಯೂರ್ ಮುಂಡೆ ಹೇಳಿದ್ದಾರೆ.
ಜೈಪುರದಿಂದ ಕೆಂಪು ಅಮೃತಶಿಲೆಯನ್ನು ತಂದು 1.6 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪ್ರಧಾನಿ ಮೋದಿ ಅವರ ವಿಗ್ರಹದ ತೆರೆದ ದೇವಾಲಯವನ್ನು ಮುಂಡೆ ನಿರ್ಮಿಸಿದ್ದರು.