ಕರ್ನಾಟಕ

karnataka

ETV Bharat / bharat

ಉಕ್ರೇನ್‌ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ಪೋಷಕರಿಗೆ ಕರೆ ಮಾಡಿ ಧೈರ್ಯ ತುಂಬಿದ ಮೋದಿ

ಇಂದು ಬೆಳಗ್ಗೆ ಉಕ್ರೇನ್‌ ನಗರ ಖಾರ್ಕಿವ್‌ನಲ್ಲಿ ಸ್ನೇಹಿತರೊಂದಿಗೆ ತನ್ನ ಮನೆಗೆ ಅಗತ್ಯ ವಸ್ತು ಖರೀದಿ ಮಾಡಲು ಸರತಿ ಸಾಲಲ್ಲಿ ನಿಂತಿದ್ದ ವೇಳೆ ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಕರ್ನಾಟಕದ ಮೆಡಿಕಲ್ ವಿದ್ಯಾರ್ಥಿ ನವೀನ್(21)​​ ಸಾವನ್ನಪ್ಪಿದ್ದು, ಹಾವೇರಿಯಲ್ಲಿರುವ ಅವರ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಇದೇ ವೇಳೆ, ಕುಟುಂಬದವರ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ.

PM spoke with father of Naveen Father
PM spoke with father of Naveen Father

By

Published : Mar 1, 2022, 5:55 PM IST

Updated : Mar 1, 2022, 6:01 PM IST

ನವದೆಹಲಿ:ಉಕ್ರೇನ್​​ನ ಖಾರ್ಕಿವ್ ನಗರದಲ್ಲಿ ರಷ್ಯಾ ಮಿಲಿಟರಿ ಪಡೆ ನಡೆಸಿರುವ ಭೀಕರ ಶೆಲ್ ದಾಳಿಯಲ್ಲಿ ಕರ್ನಾಟಕದ ಮೆಡಿಕಲ್‌ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

ವಿದ್ಯಾರ್ಥಿ ನವೀನ್​ ಸಾವನ್ನಪ್ಪಿರುವ ವಿಷಯವನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ನವೀನ್ ತಂದೆಗೆ ಕರೆ ಮಾಡಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ:'ಪ್ರತಿ ನಿಮಿಷವೂ ಅಮೂಲ್ಯ...' ನವೀನ್ ಸಾವಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ಕಾಂಗ್ರೆಸ್, ಎಎಪಿ ವಾಗ್ದಾಳಿ

ರಷ್ಯಾ-ಉಕ್ರೇನ್ ರಾಯಭಾರಿಗಳಿಗೆ ಬುಲಾವ್: ಇನ್ನೊಂದೆಡೆ,ಉಕ್ರೇನ್​​ನಲ್ಲಿ ಭಾರತದ ವಿದ್ಯಾರ್ಥಿ ಸಾವನ್ನಪ್ಪುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಭಾರತದಲ್ಲಿರುವ ರಷ್ಯಾ- ಉಕ್ರೇನ್ ರಾಯಭಾರ ಕಚೇರಿ ಅಧಿಕಾರಿಗಳಿಗೆ ಬುಲಾವ್ ನೀಡಿದ್ದು, ತಕ್ಷಣವೇ ಭಾರತೀಯ ಪ್ರಜೆಗಳಿಗೆ ಸುರಕ್ಷತೆ ಒದಗಿಸುವಂತೆ ಸೂಚಿಸಿದೆ.

Last Updated : Mar 1, 2022, 6:01 PM IST

ABOUT THE AUTHOR

...view details