ಪಾಟ್ನಾ (ಬಿಹಾರ):ಮೊದಲು ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲಿ, ಬಳಿಕ ನಾವೆಲ್ಲ ಲಸಿಕೆ ಪಡೆಯುತ್ತೇವೆಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಆರ್‌ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ಹೇಳಿಕೆ ನೀಡಿದ್ದಾರೆ.
ಇಂದು ದೇಶಾದ್ಯಂತ ಎರಡನೇ ಹಂತದ ಕೊರೊನಾ ಲಸಿಕೆಯ ಡ್ರೈ ರನ್ ನಡೆಯುತ್ತಿದ್ದು, ಶೀಘ್ರದಲ್ಲೇ ಲಸಿಕೆ ವಿತರಣೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್, ಮೊದಲ ಲಸಿಕೆಯನ್ನು ಪಿಎಂ ಮೋದಿ ಪಡೆದರೆ ಅದು ದೇಶದ ಜನರಲ್ಲಿ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದ್ದಾರೆ.