ಕರ್ನಾಟಕ

karnataka

ETV Bharat / bharat

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯ ಪ್ರಯೋಜನಗಳನ್ನ ಬಿಡುಗಡೆ ಮಾಡಿದ ಮೋದಿ - ಪಿಎಂ ಕೇರ್ಸ್

ಮಾರ್ಚ್ 11, 2020ರಿಂದ ಕಳೆದ 2022ರ ಫೆಬ್ರವರಿ 28ರ ನಡುವಿನ ಅವಧಿಯಲ್ಲಿ COVID-19 ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರು, ಕಾನೂನುಬದ್ಧ ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಬದುಕುಳಿದಿರುವ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಅಧ್ಯಯನ, ಜೀವನಕ್ಕಾಗಿ ಪ್ರಧಾನಮಂತ್ರಿಯವರು ಮೇ 29, 2021ರಂದು ಮಕ್ಕಳಿಗಾಗಿ PM ಕೇರ್ಸ್ ಯೋಜನೆ ಪ್ರಾರಂಭಿಸಿದರು..

ಮೋದಿ
ಮೋದಿ

By

Published : May 30, 2022, 1:08 PM IST

ನವದೆಹಲಿ: 'ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್' ಯೋಜನೆಯಡಿ ಶಿಕ್ಷಣ ಮತ್ತು ಇತರೆ ದೈನಂದಿನ ಅಗತ್ಯಗಳಿಗಾಗಿ ಕೋವಿಡ್-19ನಿಂದ ತಮ್ಮ ಪೋಷಕರನ್ನ ಕಳೆದುಕೊಂಡ ಮಕ್ಕಳಿಗಾಗಿ ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೆ 4,000 ರೂ. ಘೋಷಿಸಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಪ್ರಯೋಜನಗಳನ್ನ ಬಿಡುಗಡೆ ಮಾಡಿದ ಮೋದಿ, ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಜನರ ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ ಎಂದು ನನಗೆ ತಿಳಿದಿದೆ. ನಾನು ಮಕ್ಕಳೊಂದಿಗೆ ಪ್ರಧಾನಿಯಾಗಿ ಮಾತನಾಡುತ್ತಿಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಮಾತನಾಡುತ್ತಿದ್ದೇನೆ ಎಂದರು.

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಮೂಲಕ ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಸಾಲದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಯೋಜನೆಯು ಸಹಾಯ ಮಾಡುತ್ತದೆ ಎಂದರು.

ಮಾರ್ಚ್ 11, 2020ರಿಂದ ಕಳೆದ 2022ರ ಫೆಬ್ರವರಿ 28ರ ನಡುವಿನ ಅವಧಿಯಲ್ಲಿ COVID-19 ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರು, ಕಾನೂನುಬದ್ಧ ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಬದುಕುಳಿದಿರುವ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಅಧ್ಯಯನ, ಜೀವನಕ್ಕಾಗಿ ಪ್ರಧಾನಮಂತ್ರಿಯವರು ಮೇ 29, 2021ರಂದು ಮಕ್ಕಳಿಗಾಗಿ PM ಕೇರ್ಸ್ ಯೋಜನೆ ಪ್ರಾರಂಭಿಸಿದರು.

ವಸತಿ, ಶಿಕ್ಷಣ ಮತ್ತು ವಿದ್ಯಾರ್ಥಿ ವೇತನದ ಮೂಲಕ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆ ಮಾಡುವುದು ಹಾಗೂ 23ನೇ ವಯಸ್ಸಿಗೆ ಬಂದ ಬಳಿಕ ಅವರನ್ನ ಸ್ವಾವಲಂಬಿ ಬದುಕಿಗೆ ಸಜ್ಜುಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಗೆ ಅರ್ಹ ಮಕ್ಕಳನ್ನು ನೋಂದಾಯಿಸಲು ಸರ್ಕಾರವು ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ಸಿಂಗಲ್​-ವಿಂಡೋ ವ್ಯವಸ್ಥೆಯಾಗಿದ್ದು, ಇದು ಮಕ್ಕಳ ಅನುಮೋದನೆ ಪ್ರಕ್ರಿಯೆ ಮತ್ತು ಎಲ್ಲಾ ಇತರ ಸಹಾಯವನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ :ಕೋವಿಡ್, ಮಂಕಿಪಾಕ್ಸ್‌ ಬಳಿಕ ಇದೀಗ ಲಸಿಕೆಯೇ ಇರದ ಕಾಂಗೋ ಹಾವಳಿ ಶುರು!

ABOUT THE AUTHOR

...view details