ಕರ್ನಾಟಕ

karnataka

ETV Bharat / bharat

'ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ - 'ಪ್ರಥಮ ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

ಲತಾ ಮಂಗೇಶ್ಕರ್ ಅವರು ಯಾವಾಗಲೂ ಬಲಿಷ್ಠ ಮತ್ತು ಸಮೃದ್ಧ ಭಾರತದ ಕನಸು ಕಾಣುತ್ತಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

'ಪ್ರಥಮ ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ
'ಪ್ರಥಮ ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ

By

Published : Apr 24, 2022, 7:42 PM IST

ಮುಂಬೈ: 'ನನಗೆ ಲತಾ ದೀದಿ ಸಹೋದರಿ ಇದ್ದಂತೆ. ನಾನು ಯಾವಾಗಲೂ ಅವರಿಂದ ಅಪಾರ ಪ್ರೀತಿ ಗಳಿಸಿದ್ದೇನೆ. ಹಾಗಾಗಿ, ಈ ಪ್ರಶಸ್ತಿಯನ್ನು ಒಪ್ಪಿಕೊಳ್ಳದಿರಲು ಸಾಧ್ಯವೇ ಇಲ್ಲ. ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ ಎಂದು ಪ್ರಥಮ 'ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.

ಮುಂಬೈನಲ್ಲಿ ಇಂದು 80ನೇ ವಾರ್ಷಿಕ 'ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ' ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶ ಮತ್ತು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಮೊದಲ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದರು.

ಈ ವೇಳೆ ಶ್ರೇಷ್ಠ ಗಾಯಕಿಯನ್ನು ಸ್ಮರಿಸಿ ಮಾತನಾಡಿದ ಪ್ರಧಾನಿ, ಲತಾ ಮಂಗೇಶ್ಕರ್ ಅವರು ಯಾವಾಗಲೂ ಬಲಿಷ್ಠ ಮತ್ತು ಸಮೃದ್ಧ ಭಾರತದ ಕನಸು ಕಾಣುತ್ತಿದ್ದರು. ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಈ ವರ್ಷದ ಪ್ರಾರಂಭದಲ್ಲಿ ಮುಂಬೈನಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದ ಭಾರತ ರತ್ನ ಲತಾ ಮಂಗೇಶ್ಕರ್ ಅವರ ಸ್ಮರಣೆ ಹಾಗೂ ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ:ಕುಲ್ಗಾಮ್​ನಲ್ಲಿ ಗುಂಡಿನ ಚಕಮಕಿ: ಮೂವರು ಎಲ್​ಇಟಿ ಉಗ್ರರು ಖತಂ

For All Latest Updates

TAGGED:

ABOUT THE AUTHOR

...view details