ಗಾಂಧಿನಗರ (ಗುಜರಾತ್) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗಾಂಧಿನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಾಲ್ಕರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯ ಸಾಧಿಸಿದ ನಂತರ ಮೋದಿ ತಮ್ಮ ತಾಯಿಯ ಬಳಿ ಬಂದು ಅವರ ಕಾಲಿಗೆರಗಿ ಕೆಲಕಾಲ ಮಾತುಕತೆ ನಡೆಸಿ ನಂತರ ಜೊತೆಗೆ ಉಪಹಾರ ಸೇವಿಸಿದ್ದಾರೆ.
ದೇಶಕ್ಕೆ ಪ್ರಧಾನಿಯಾದರೂ ತಾಯಿಗೆ ಮಗ ಎರಡು ದಿನಗಳ ಭೇಟಿಗಾಗಿ ಮೋದಿ ಪ್ರಸ್ತುತ ತವರು ರಾಜ್ಯದಲ್ಲಿದ್ದು, ನಾಳೆ ದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ:ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು: ದೆಹಲಿಯಲ್ಲಿ ಭಿನ್ನಮತೀಯ ನಾಯಕರ ಸಭೆ
ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಾಡು ಗುಜರಾತ್. ಬಾಪು ಯಾವಾಗಲೂ ಗ್ರಾಮೀಣಾಭಿವೃದ್ಧಿ, ಸ್ವಾವಲಂಬಿ ಹಳ್ಳಿಗಳ ಬಗ್ಗೆ ಮಾತನಾಡುತ್ತಿದ್ದರು. ಇಂದು ನಾವು 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಬೆನ್ನಲ್ಲೇ ಗ್ರಾಮೀಣ ವಿಕಾಸದ ಬಗ್ಗೆ ಇದ್ದ ಬಾಪು ಅವರ ಕನಸನ್ನು ನನಸಾಗಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.