ನವದೆಹಲಿ: ಕೇಂದ್ರ ಸರಕಾರವು 10 ಲಕ್ಷ ಜನರ ನೇಮಕಾತಿ ಮಾಡಿಕೊಳ್ಳುವ ರೋಜಗಾರ್ ಯೋಜನೆಗೆ (ಉದ್ಯೋಗ ಮೇಳ) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಮೇಳದಲ್ಲಿ ಹೊಸದಾಗಿ 75,000 ಮಂದಿಗೆ ಸರಕಾರಿ ನೌಕರಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು. ಕೇಂದ್ರ ಸರಕಾರವು ಯುವಜನರಿಗೆ ಮಾತು ಕೊಟ್ಟಂತೆ ಈ ಉದ್ಯೋಗ ಮೇಳದ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸುವುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ.
38 ಕೇಂದ್ರ ಸಚಿವಾಲಯ, ಇಲಾಖೆ:ಭಾರತ ಸರ್ಕಾರದ 38 ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿ ಸರಕಾರಿ ನೌಕರಿ ಪಡೆದ ಫಲಾನುಭವಿಗಳು ಕಾರ್ಯನಿರ್ವಹಿಸಲಿದ್ದಾರೆ. ಗ್ರೂಪ್ - ಎ, ಗ್ರೂಪ್ - ಬಿ (ಗೆಜೆಟೆಡ್), ಗ್ರೂಪ್ - ಬಿ (ನಾನ್-ಗೆಜೆಟೆಡ್) ಮತ್ತು ಗ್ರೂಪ್ - ಸಿ ಸೇರಿದಂತೆ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು, ಎಂಟಿಎಸ್ ಮತ್ತಿತರ ಇಲಾಖೆಗಳಲ್ಲಿ ಹೊಸಬರ ನೇಮಕಾತಿ ನಡೆಯಲಿದೆ.