ಕರ್ನಾಟಕ

karnataka

ETV Bharat / bharat

IIT ಕಾನ್ಪುರಗೆ ಪಿಎಂ ಭೇಟಿ: ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಭೇಟಿ ಮಾಡಿದ ನಮೋ! - ಐಐಟಿ ಕಾನ್ಪುರದಲ್ಲಿ ನಮೋ ಸಂವಾದ

Modi at IIT Kanpur: ಉತ್ತರ ಪ್ರದೇಶದ ಕಾನ್ಪುರದ ಐಐಟಿ ಕ್ಯಾಂಪಸ್​ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಘಟಿಕೋತ್ಸವದಲ್ಲಿ ಭಾಗಿಯಾದರು. ಈ ವೇಳೆ ದಿಢೀರ್​ ಆಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಗಮನ ಸೆಳೆದರು.

Modi at IIT Kanpur
Modi at IIT Kanpur

By

Published : Dec 28, 2021, 7:52 PM IST

ಕಾನ್ಪುರ(ಉತ್ತರ ಪ್ರದೇಶ):ಐಐಟಿ ಕಾನ್ಪುರದ 54ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ದಿಢೀರ್​ ಆಗಿ ಸಂವಾದ ನಡೆಸಿ ಎಲ್ಲರ ಗಮನ ಸೆಳೆದರು. ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಶುಭಾಶಯ ಕೋರಿದ್ದು, ಕೆಲ ಹೊತ್ತು ಮಾತುಕತೆ ನಡೆಸಿ, ಹಾಸ್ಯ ಚಟಾಕಿ ಹಾರಿಸಿದರು.

ಉತ್ತರ ಪ್ರದೇಶದ ಕಾನ್ಪುರ್​ ಐಐಟಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿ, ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ನವ ಭಾರತದ ನಿರ್ಮಾಣಕ್ಕಾಗಿ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದ ನಮೋ, ಯಶಸ್ಸು ಸಾಧಿಸಲು ಅಡ್ಡ ದಾರಿ ಹಿಡಿಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದಿನ 25 ವರ್ಷದ ನಂತರ ದೇಶ ಸಂಪೂರ್ಣವಾಗಿ ಸ್ವಾವಲಂಬಿಯಾಗಬೇಕು. ಇದಕ್ಕಾಗಿ ನೀವು ಹೊಸ ಹೊಸ ಸವಾಲು ಎದುರಿಸಲು ಸಜ್ಜುಗೊಳ್ಳುವಂತೆ ಕರೆ ನೀಡಿದರು.

ಇದನ್ನೂ ಓದಿರಿ:ತುಂಬಿ ಹರಿಯುವ ನದಿಯಲ್ಲೇ ಗರ್ಭಿಣಿ ಹೊತ್ತು ಸಾಗಿದ ಸಂಬಂಧಿಕರು-ವಿಡಿಯೋ

ವಿದ್ಯಾರ್ಥಿಗಳೊಂದಿಗೆ ದಿಢೀರ್​ ಸಂವಾದ ನಡೆಸಿದ ನಮೋ

ಐಐಟಿ ಕಾನ್ಪುರದ ಮತ್ತೊಂದು ಕಟ್ಟಡಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕೆಲಹೊತ್ತು ಸಂವಾದ ನಡೆಸಿದರು. ವಿಶೇಷವೆಂದರೆ ಪ್ರಧಾನಿಯವರ ವೇಳಾಪಟ್ಟಿಯಲ್ಲಿ ಈ ವಿದ್ಯಾರ್ಥಿಗಳ ಭೇಟಿ ಇರಲಿಲ್ಲ. ಪ್ರಧಾನಿ ಅಲ್ಲಿಗೆ ತೆರಳುತ್ತಿದ್ದಂತೆ ವಿದ್ಯಾರ್ಥಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ, ಸ್ವಾಗತಿಸಿದ್ದಾರೆ. ಈ ವೇಳೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್​​ ಪಟೇಲ್​ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿರುವ ವಿಡಿಯೋ ತುಣಕು ಇದೀಗ ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ.

ಇದಕ್ಕೂ ಮುಂಚಿತವಾಗಿ 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 32 ಕಿಲೋ ಮೀಟರ್​ ಉದ್ದದ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ ನಮೋ, ಟಿಕೆಟ್ ಖರೀದಿಸಿ 10 ನಿಮಿಷಗಳ ಕಾಲ ಪ್ರಯಾಣ ಮಾಡಿದರು.

ABOUT THE AUTHOR

...view details