ನವದೆಹಲಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ವಿತರಣೆ ಮಾಡಲಾಗುತ್ತಿರುವ ಉಚಿತ ಪಡಿತರವನ್ನ ಸೆಪ್ಟೆಂಬರ್ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣಕ್ಕಾಗಿ 2020ರ ಮಾರ್ಚ್ ತಿಂಗಳಲ್ಲಿ ಉಚಿತವಾಗಿ ಪಡಿತರ ವಿತರಣೆ ಘೋಷಣೆ ಮಾಡಲಾಗಿತ್ತು. ಆರಂಭದಲ್ಲಿ 2020ರ ಜೂನ್ವರೆಗೆ ನಿಗದಿ ಮಾಡಿದ್ದ ಈ ಯೋಜನೆಯನ್ನ ನಂತರ ವಿಸ್ತರಣೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಮುಂದಿನ ಆರು ತಿಂಗಳ ಕಾಲ ಯೋಜನೆ ವಿಸ್ತರಣೆಯಾಗಿದೆ. ಹೀಗಾಗಿ ದೇಶದ 80 ಕೋಟಿ ಪಡಿತರ ಕಾರ್ಡ್ದಾರರಿಗೆ ಉಚಿತವಾಗಿ ರೇಷನ್ ಸಿಗಲಿದೆ.