ಕರ್ನಾಟಕ

karnataka

ETV Bharat / bharat

'ಪರೀಕ್ಷಾ ಪೇ ಚರ್ಚಾ': ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆಗಿಂದು ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವಿವರ, ನಡೆಯುವ ಸಮಯ, ವೀಕ್ಷಣೆಯ ಕುರಿತಾದ ಮಾಹಿತಿ ಇದೆ.

Prime Minister  Modi's Pariksha Pe Charcha  held today
ಪ್ರಧಾನಿ ಮೋದಿ ಅವರಿಂದ 'ಪರೀಕ್ಷಾ ಪೇ ಚರ್ಚಾ ಕಾರ್ಯ':ಪರೀಕ್ಷೆ ಒತ್ತಡ ನಿಭಾಯಿಸಲು ವಿದ್ಯಾರ್ಥಿಗಳಿಗೆ ಸಲಹೆ

By

Published : Apr 1, 2022, 8:19 AM IST

Updated : Apr 1, 2022, 9:08 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' ಸರಣಿ ಕಾರ್ಯಕ್ರಮದ ಭಾಗವಾಗಿ ಸುಮಾರು 1,000 ವಿದ್ಯಾರ್ಥಿಗಳೊಂದಿಗೆ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಈವರೆಗೆ ನಾಲ್ಕು ಆವೃತ್ತಿಗಳು ನಡೆದಿದ್ದು, ಇಂದಿನ ಐದನೇ ಆವೃತ್ತಿಯಲ್ಲಿ 6 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಸಮಯ ಬಂದಿದ್ದು, ಈ ಹಿನ್ನೆಲೆಯಲ್ಲಿ ಗುರುವಾರವಷ್ಟೇ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸಲಹೆಗಳನ್ನು ಹೊಂದಿರುವ ವಿಡಿಯೋಗಳ ಸರಣಿಯನ್ನು ಪ್ರಧಾನಮಂತ್ರಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗಳಲ್ಲಿ ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಲಹೆ ನೀಡಲಾಗಿದೆ.

ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಹೇಗೆ?

  • ಕೇಂದ್ರ ಸರ್ಕಾರದ www.innovateindia.mygov.in ವೆಬ್​​ಸೈಟ್​ನಲ್ಲಿ ಮೊದಲಿಗೆ ಹೆಸರು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕು.
  • ತಮಗೆ ಸ್ಪರ್ಧೆಯಲ್ಲಿ ನೀಡಿರುವ ಥೀಮ್​​ಗಳಲ್ಲಿ ಯಾವುದಾದರೂ ಒಂದು ಥೀಮ್ ಬಗ್ಗೆ ವಿದ್ಯಾರ್ಥಿಗಳು 500 ಪದಗಳಲ್ಲಿ ಬರೆದು ಕಳುಹಿಸಬೇಕು.
  • ಪೋಷಕರು ಮತ್ತು ಶಿಕ್ಷಕರು ತಮಗಾಗಿ ಪ್ರತ್ಯೇಕವಾಗಿ ನೀಡಿರುವ ಆನ್​​ಲೈನ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು.
  • ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳು ನೇರವಾಗಿ ಪ್ರಧಾನಮಂತ್ರಿ ಅವರೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.
  • ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ಅನ್ನು ನೀಡಲಾಗುತ್ತದೆ.
  • ಸ್ಪರ್ಧೆಯಲ್ಲಿ ಗೆದ್ದ ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ರೂಪಿಸಲಾದ ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ.
  • ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಮಾತ್ರ ಪ್ರಧಾನಿಯೊಂದಿಗೆ ಸಂವಾದ ನಡೆಸಲು, ಪ್ರಶ್ನೆ ಕೇಳಲು ಅವಕಾಶ ನೀಡಲಾಗುತ್ತದೆ.
  • ಸ್ಪರ್ಧೆಯಲ್ಲಿ ಪ್ರಧಾನಿ ಅವರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳಿಗೆ ಪ್ರಧಾನಿ ಅವರ ಸಹಿ ಇರುವ, ಡಿಜಿಟಲ್ ಸ್ಮರಣಿಕೆಯನ್ನು ಪಡೆಯಬಹುದು.

ಕಾರ್ಯಕ್ರಮವನ್ನು ಹೀಗೆ ವೀಕ್ಷಿಸಿ..

ಪರೀಕ್ಷಾ ಪೇ ಚರ್ಚಾ ಆಫ್​ಲೈನ್ ಕಾರ್ಯಕ್ರಮವಾದರೂ, ಪ್ರೋಟೋಕಾಲ್ ಪ್ರಕಾರ, ಇದನ್ನು ನೇರಪ್ರಸಾರ ಮಾಡಲಾಗುತ್ತದೆ. ಶಿಕ್ಷಣ ಸಚಿವಾಲಯದ ಅಧಿಕೃತ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದಾಗಿದೆ. ಇದು ಮಾತ್ರವಲ್ಲದೇ PPC 2022 ಯೂಟ್ಯೂಬ್​ನಲ್ಲಿ ಲೈವ್ ವೀಕ್ಷಿಸಲು ಲಭ್ಯವಿರುತ್ತದೆ. ಪರೀಕ್ಷಾ ಪೇ ಚರ್ಚಾ-2022 ಅನ್ನು ದೂರದರ್ಶನ ಮತ್ತು ಸ್ವಯಂ ಪ್ರಧಾ ಚಾನೆಲ್‌ಗಳ ಮೂಲಕ ದೇಶಾದ್ಯಂತ ನೇರಪ್ರಸಾರ ಮಾಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. www.youtube.com/watch?v=LO3jZcDe8VA ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆ ಮಾಡಬಹುದು.

Last Updated : Apr 1, 2022, 9:08 AM IST

ABOUT THE AUTHOR

...view details