ಕರ್ನಾಟಕ

karnataka

ETV Bharat / bharat

ಮಾ.12ಕ್ಕೆ ಅಹಮದಾಬಾದ್​ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ - ಮಹಾತ್ಮ ಗಾಂಧಿಯವರು ದಂಡಿಯಾತ್ರೆ

ಮಾರ್ಚ್ 12 ಕ್ಕೆ ಮಹಾತ್ಮ ಗಾಂಧಿಯವರು ನಡೆಸಿದ ದಂಡಿಯಾತ್ರೆ ನಡೆದು 91 ವರ್ಷ ಪೂರೈಸುತ್ತಿದ್ದು, ಇದರ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಅಹಮದಾಬಾದ್​ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಮೋದಿ
ಮೋದಿ

By

Published : Mar 8, 2021, 1:18 PM IST

ಗುಜರಾತ್​: ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆ ಉಪ್ಪಿನ ಮೇಲೆ ವಿಧಿಸಿದ ಕರ ವಿರೋಧಿಸಿ ಮಹಾತ್ಮ ಗಾಂಧಿಯವರು ದಂಡಿಯಾತ್ರೆ ನಡೆಸಿದ್ದರು. ಇದೀಗ ಮಾರ್ಚ್ 12 ಕ್ಕೆ ಈ ದಂಡಿಯಾತ್ರೆ ನಡೆದು ಬರೋಬ್ಬರಿ 91 ವರ್ಷಗಳು ಪೂರ್ಣಗೊಳ್ಳಲಿದೆ.

ಸಬರಮತಿ ಆಶ್ರಮದಿಂದ ದಾಂಡಿಯವರೆಗಿನ ಮಹಾತ್ಮ ಗಾಂಧಿಯವರು ತಮ್ಮ ಅನುಯಾಯಿಗಳೊಂದಿಗೆ 240 ಮೈಲಿ ಕಾಲ್ನಡಿಗೆಯಲ್ಲಿ ನಡೆದು ಉಪ್ಪಿನ ಸತ್ಯಾಗ್ರಹ ಚಳವಳಿಯನ್ನು ನಡೆಸಿದ್ದರು. ಮಾರ್ಚ್ 12 ಕ್ಕೆ ಈ ದಂಡಯಾತ್ರೆ ನಡೆದು 91 ವರ್ಷ ಪೂರೈಸುತ್ತಿದ್ದು, ಇದರ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಅಹಮದಾಬಾದ್​ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಇನ್ನು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿಯವರು ಐತಿಹಾಸಕಾರರ ಕುರಿತು ಸಹ ಹೆಚ್ಚಿನ ಒಲವು ಹೊಂದಿದ್ದಾರೆ.

ABOUT THE AUTHOR

...view details