ಕರ್ನಾಟಕ

karnataka

ETV Bharat / bharat

'ಗ್ಯಾಮ್ಚಾ' ಧರಿಸಿ ಬಂದ ಪ್ರಧಾನಿಗೆ ಲಸಿಕೆ ಹಾಕಿದ ಕೇರಳ-ಪುದುಚೇರಿ ಮೂಲದ ನರ್ಸ್​ಗಳು! - Prime Minister Modi vaccinated by nurses

ಪುದುಚೇರಿಯ ಸಿಸ್ಟರ್​ ಪಿ. ನಿವಿದ ಮತ್ತು ಕೇರಳದ ರೋಸಮ್ಮ ಅನಿಲ್​ ಎಂಬುವರು ಪ್ರಧಾನಿ ಮೋದಿಯವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ ಇಬ್ಬರು ನರ್ಸ್​ಗಳು..

Prime Minister Modi vaccinated
ಪ್ರಧಾನಿಗೆ ಲಸಿಕೆ ಹಾಕಿದ ಕೇರಳ-ಪುದುಚೇರಿ ಮೂಲದ ನರ್ಸ್​ಗಳು

By

Published : Mar 1, 2021, 9:35 AM IST

ನವದೆಹಲಿ :ಇಂದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಕೋವಿಡ್​-19 ವ್ಯಾಕ್ಸಿನ್​ ತೆಗೆದುಕೊಂಡಿದ್ದಾರೆ. ಈ ಮೂಲಕ ಎಲ್ಲರೂ ಒಗ್ಗೂಡಿ ಕೊರೊನಾ ಮುಕ್ತ ದೇಶ ನಿರ್ಮಾಣ ಮಾಡೋಣ ಎಂದು ಕರೆಕೊಟ್ಟಿದ್ದಾರೆ.

ಇನ್ನು, ಈ ವೇಳೆ ಅಸ್ಸೋಂನ ಸಂಸ್ಕೃತಿಯ ಪ್ರತೀಕವಾದ ಗ್ಯಾಮ್ಚಾವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಗ್ಯಾಮ್ಚಾ ಅಸ್ಸೋಂನ ಮಹಿಳೆಯರ ಆಶೀರ್ವಾದದ ಸಂಕೇತವಾಗಿದೆ. ಪ್ರಧಾನಿ ಅನೇಕ ಸಂದರ್ಭದಲ್ಲಿ ಗ್ಯಾಮ್ಚಾ ಧರಿಸಿರುವುದನ್ನು ಕಾಣಬಹುದು.

ಇದನ್ನು ಓದಿ: ಏಮ್ಸ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ

ಪುದುಚೇರಿಯ ಸಿಸ್ಟರ್​ ಪಿ. ನಿವಿದ ಮತ್ತು ಕೇರಳದ ರೋಸಮ್ಮ ಅನಿಲ್​ ಎಂಬುವರು ಪ್ರಧಾನಿ ಮೋದಿಯವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಿದ ಇಬ್ಬರು ನರ್ಸ್​ಗಳು.

ABOUT THE AUTHOR

...view details