ನವದೆಹಲಿ:ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಕೋವಿಡ್ ಪರಿಸ್ಥಿತಿಯ ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ ಒಮಿಕ್ರಾನ್ ಕೋವಿಡ್ ರೂಪಾಂತರ, ಸಾಮಾನ್ಯ ಕೊರೊನಾಗಿಂತ ಮೂರು ಪಟ್ಟು ವೇಗವಾಗಿ ಹರಡಲಿದೆ ಎಂದು ಎಚ್ಚರಿಸಿದೆ. ಅಷ್ಟೇ ಅಲ್ಲದೇ ಕೋವಿಡ್ ಪೀಡಿತರು, ಆಸ್ಪತ್ರೆಯ ಮೂಲಸೌಕರ್ಯ, ಸಿಬ್ಬಂದಿ, ಮುಂತಾದ ಮಾಹಿತಿಯನ್ನು ಪರಿಶೀಲನೆ ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ಇಷ್ಟೇ ಅಲ್ಲದೇ ರಾಜ್ಯಗಳಲ್ಲಿ ಕೋವಿಡ್ ವಾರ್ ರೂಮ್ ಸಕ್ರಿಯಗೊಳಿಸಲು ಹಾಗೂ ಸಮಸ್ಯೆಗಳನ್ನು ವಿಶ್ಲೇಷಣೆ ಮಾಡಲು ಕೇಂದ್ರ ಸೂಚನೆ ನೀಡಿದೆ. ಸ್ಥಳೀಯ ಮಟ್ಟದಲ್ಲಿ ಕೋವಿಡ್ ಹರಡದಂತೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಒಂದು ವೇಳೆ ಸ್ಥಳೀಯ ಮಟ್ಟದಲ್ಲಿ ಸೋಂಕು ಕಾಣಿಸಿಕೊಂಡರೆ, ಅದನ್ನು ಇತರ ಪ್ರದೇಶಗಳಿಗೆ ಹರಡದಂತೆ ತಡೆಯಲು ಕಾರ್ಯತಂತ್ರ ರೂಪಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ:ಮದ್ಯ ಸೇವನೆ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದ ಹರಿಯಾಣ ಸರ್ಕಾರ