ಕರ್ನಾಟಕ

karnataka

ETV Bharat / bharat

ಆಫ್ಘನ್​ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ - ಕಾಶ್ಮೀರದ ಸಮಸ್ಯೆ ಆಂತರಿಕ

ಆಫ್ಘನ್​ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು ಹಿರಿಯ ಸಚಿವರ ಜತೆ ಸಭೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ

By

Published : Aug 17, 2021, 8:51 PM IST

ನವದೆಹಲಿ : ಅಫ್ಘಾನಿಸ್ತಾನದಲ್ಲಿ ಕ್ಷಣದಿಂದ ಕ್ಷಣಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆ, ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ನಿವಾಸ ಲೋಕಕಲ್ಯಾಣ ಮಾರ್ಗದಲ್ಲಿ ಭದ್ರತಾ ಕ್ಯಾಬಿನೆಟ್​ ಸಮಿತಿ ಸಭೆ ನಡೆಸಿದರು. ಮೋದಿ ಸಭೆಯ ಅಧ್ಯಕ್ಷತೆ ವಹಿಸಿದ್ದು, ರಕ್ಷಣಾ ಸಚಿವರು, ಗೃಹ ಸಚಿವರು, ಹಣಕಾಸು ಸಚಿವ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಭಾಗಿಯಾಗಿದ್ದರು.

ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕಾಬೂಲ್​ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕಾಬೂಲ್​ನಿಂದ ಭಾರತದ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಿತು. ಆಫ್ಘನ್​ನಲ್ಲಿದ್ದ ಭಾರತದ ಬಹುತೇಕ ಸಿಬ್ಬಂದಿಯನ್ನು ನವದೆಹಲಿಗೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಕಾಶ್ಮೀರದ ಸಮಸ್ಯೆ ಆಂತರಿಕ

ಕಾಶ್ಮೀರ ಸಮಸ್ಯೆ ಉಭಯ ರಾಷ್ಟ್ರಗಳ ಆಂತರಿಕ ಸಮಸ್ಯೆಯಾಗಿದ್ದು, ನಾವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಾಲಿಬಾನ್ ಈಗಾಗಲೇ ಸ್ಪಷ್ಟನೆ ನೀಡಿದೆ.

ತಾಲಿಬಾನ್​ ಮೇಲೆ ಪಾಕ್​ ಪ್ರಭಾವ ಕಡಿಮೆ

ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್‌ ಇಂಟೆಲಿಜೆನ್ಸ್‌ ಸರ್ವಿಸಸ್‌ (ಐಎಸ್‌ಐ) ತಾಲಿಬಾನ್‌ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತದೆ ಎಂದು ವರದಿಯಾಗಿದೆ. ಆದರೂ, ಪಾಕಿಸ್ತಾನವು ತಾಲಿಬಾನ್ ಮೇಲೆ ಸಂಪೂರ್ಣವಾಗಿ ಪ್ರಭಾವ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕಿದೆ. ಏಕೆಂದರೆ ತಾಲಿಬಾನ್​ ತನ್ನ ಶಕ್ತಿಯಿಂದ ಅಧಿಕಾರ ಪಡೆದುಕೊಂಡಿದೆ. ಐಎಸ್​ಐ, ಈ ಹಿಂದಿನ ತಾಲಿಬಾನ್​ ಪಡೆಗಳ ಮೇಲೆ ಪ್ರಭಾವ ಬೀರಬಹುದಿತ್ತು. ಪ್ರಸ್ತುತ ಇದು ಅಸಂಭವ ಎಂದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ತಾಲಿಬಾನ್​ಗೆ ಶರಣಾಗಲ್ಲ..ನಾನೇ ಅಫ್ಘಾನ್ ಅಧ್ಯಕ್ಷ ಎಂದ ಮಾಜಿ ಉಪಾಧ್ಯಕ್ಷ!

ABOUT THE AUTHOR

...view details