ಬೆಂಗಳೂರು:ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು.
ಮೋದಿ ಅವರನ್ನು ಸ್ಥಳೀಯ ಕಲಾವಿದರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಧೋಲ್ ನುಡಿಸುವ ಮೂಲಕ ಸ್ವಾಗತಿಸಿದರು. ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್‌ಗೆ ಎರಡು ರಾಷ್ಟ್ರಗಳ ಭೇಟಿಯನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿದರು.
ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ. ಡಿಜಿಪಿ ಅಲೋಕ್ ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹೂ ಗುಚ್ಚ ನೀಡಿ ಬೆಂಗಳೂರಿಗೆ ವೆಲ್ ಕಮ್ ಮಾಡಿದರು. ಇಲ್ಲಿಂದ ಪ್ರಧಾನಿ ಜಾಲಹಳ್ಳಿ ಕ್ರಾಸ್ ಮೂಲಕ ಇಸ್ರೋ ಕಚೇರಿ ತಲುಪಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೂಕ್ತ ಬಿಗಿ ಭದ್ರತೆ ಮಾಡಲಾಗಿದೆ. ರಸ್ತೆ ಮಾರ್ಗಗಳನ್ನ ಬದಲಿಸಲಾಗಿದೆ.
ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ತೊಡಗಿರುವ ವಿಜ್ಞಾನಿಗಳನ್ನು ಪ್ರಧಾನಿ ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ. ಮೋದಿ ಅವರನ್ನು ಸ್ವಾಗತಿಸಲು ಪೋಸ್ಟರ್‌ಗಳು ಮತ್ತು ರಾಷ್ಟ್ರಧ್ವಜದೊಂದಿಗೆ ಸ್ಥಳೀಯರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಜಮಾಯಿಸಿ, ಅದ್ದೂರಿ ಸ್ವಾಗತ ಕೋರಿದರು.