ಕರ್ನಾಟಕ

karnataka

ETV Bharat / bharat

ರೋಜ್​​ಗಾರ್​ ಮೇಳದ ಮೂಲಕ 70,000 ನೇಮಕಾತಿ ಪತ್ರ ವಿತರಣೆ; ಪ್ರತಿಪಕ್ಷದ ವಿರುದ್ಧ ಹರಿಹಾಯ್ದ ಪ್ರಧಾನಿ - ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೊಸದಾಗಿ

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವಿದ್ದು, ನಾವು ಅಭಿವೃದ್ಧಿ ಪಥದಲ್ಲಿ ಕಾರ್ಯ ನಿರ್ವಹಿಸಬೇಕಿದೆ.

Prime Minister Modi addresses Rozgar Mela, attacks opposition on phone banking scam
Prime Minister Modi addresses Rozgar Mela, attacks opposition on phone banking scam

By

Published : Jul 22, 2023, 2:23 PM IST

ನವದೆಹಲಿ: ರೋಜ್​ಗಾರ್​ ಮೇಳದ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೊಸದಾಗಿ ನೇಮಕಗೊಂಡ 70 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದರು. ದೇಶಾದ್ಯಂತ 44 ಸ್ಥಳಗಳಲ್ಲಿ ಈ ವರ್ಚುಯಲ್​ ನೇಮಕಾತಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅವರು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಾರ್ವಜನಿಕ ಬ್ಯಾಂಕ್​ಗಳು ಸಾವಿರಾರು ಕೋಟಿ ನಷ್ಟವನ್ನು ಹೊಂದಿದ್ದವು ತಿಳಿದಿದ್ದವು. ಆದರೆ ಈಗ ಅವು ಅನುತ್ಪಾದಕ ಆಸ್ತಿಗಳು (ಎನ್​ಪಿಎ) ದಾಖಲೆಯ ಲಾಭಗಳಿಗೆ ಹೆಸರುವಾಸಿಯಾಗಿವೆ. ಹಿಂದಿನ ಸರ್ಕಾರದಲ್ಲಿ ನಡೆದ ದೊಡ್ಡ ಹಗರಣದಲ್ಲಿ ಒಂದು ಫೋನ್​ ಬ್ಯಾಂಕಿಂಗ್​ ಹಗರಣವಾಗಿದೆ. ಈ ಮೂಲಕ ನಿರ್ದಿಷ್ಟ ಕುಟುಂಬದ ಆಪ್ತರು ಸಾವಿರಾರು ಕೋಟಿ ಸಾಲ ಪಡೆದರು. ಇದು ದೇಶದ ಬ್ಯಾಂಕಿಂಗ್​ ವ್ಯವಸ್ಥೆಯನ್ನು ಹಾಳು ಮಾಡಿತು ಎಂದು ಟೀಕಿಸಿದರು.

ಇದೀಗ ಈ ಪರಿಸ್ಥಿತಿಗಳು ಬದಲಾವಣೆಯಾಗಿದ್ದು, ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣ ಕಂಡು ಬಂದಿದೆ. ಈ ಜಾಗತಿಕ ನಂಬಿಕೆ ಮತ್ತು ಆಕರ್ಷಣೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ರೋಜ್​ಗಾರ್​ ಮೇಳದ ಮೂಲಕ ಯುವ ಪೀಳಿಗೆಗೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಪ್ರಧಾನಿ ಅವರ ಬದ್ಧತೆ ಹೆಜ್ಜೆ ಇದಾಗಿದೆ. ಇದು ಯುವ ಜನರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗಿಯಾಗಲು ಅವಕಾಶ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಮುಂದಿನ 25 ವರ್ಷ ಮಹತ್ವದ್ದು: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವಿದ್ದು, ನಾವು ಅಭಿವೃದ್ಧಿ ಪಥದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಭಾರತವನ್ನು ಅಭಿವೃದ್ಧಿಯ ದೇಶವನ್ನಾಗಿ ಮಾಡುವ ನಿರ್ಣಯವನ್ನು ದೇಶದ ಜನರು ಕೈಗೊಳ್ಳಬೇಕಿದೆ. ಮುಂದಿನ 25 ವರ್ಷಗಳು ಭಾರತಕ್ಕೆ ಮಹತ್ವದ್ದಾಗಿದೆ. ಇಂದು ಪ್ರತಿಯೊಬ್ಬ ತಜ್ಞರು ಕೆಲವೇ ವರ್ಷದಲ್ಲಿ ಭಾರತ ವಿಶ್ವದ ಪ್ರಮುಖ ಮೂರು ಆರ್ಥಿಕತೆಯಲ್ಲಿ ಒಂದಾಗಲಿದೆ ಎಂದು ತಿಳಿಸುತ್ತಿದ್ದಾರೆ. ಅಂದರೆ, ಉದ್ಯೋಗಾವಕಾಶ ಮತ್ತು ತಲಾ ಆದಾಯ ಹೆಚ್ಚುತ್ತಿದೆ ಎಂದರು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಾದ ಕಂದಾಯ ಇಲಾಖೆ, ಹಣಕಾಸು ಸೇವೆಗಳ ಇಲಾಖೆ, ಅಂಚೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಸೇರಿದಂತೆ ಇನ್ನಿತರೆ ಇಲಾಖೆಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಪ್ರಧಾನ ಮಂತ್ರಿ ನೇಮಕಾತಿ ಪತ್ರ ವಿತರಿಸಿದರು. ಉದ್ಯೋಗ ಸೃಷ್ಟಿಗೆ ಮತ್ತು ಯುವ ಪೀಳಿಗೆ ಅವಕಾಶ ನೀಡುವ ಕುರಿತು ಪ್ರಧಾನಿ ಮೋದಿ ಅವರಿಗೆ ಇರುವ ಬದ್ಧತೆಯನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಈ ಕ್ರಮ ನಡೆಸಲಾಗಿದೆ ಎಂದು ಪ್ರಧಾನಿ ಮೋದಿ ಸಚಿವಾಲಯ ತಿಳಿಸಿದೆ.

ಉದ್ಯೋಗ ಮತ್ತು ಕರ್ಮಯೋಗಿಯಂತಹ ಎಲ್ಲಿಂದನಾದರೂ 580 ಇ ಲರ್ನಿಂಗ್​ ಕೋರ್ಸ್​ಗಳನ್ನು ಕಲಿಯುವಂತಹ ಕೌಶಲ್ಯಾಭಿವೃದ್ಧಿ ತರಬೇತಿಯ ಮೂಲಕ ಸರ್ಕಾರವು ಯುವ ಸಬಲೀಕರಣಕ್ಕೆ ಹೊಸ ಒತ್ತು ನೀಡುತ್ತಿದೆ.

ಇದನ್ನೂ ಓದಿ: ಕೋವಿನ್ ಪೋರ್ಟಲ್​ನಿಂದ ಆಧಾರ್ ಮಾಹಿತಿ ಸೋರಿಕೆಯಾಗಿಲ್ಲ: ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ABOUT THE AUTHOR

...view details