ಕರ್ನೂಲ್(ಆಂಧ್ರಪ್ರದೇಶ): ಪೊಲೀಸರೆಂದರೆ ಭಯ ಸಾಮಾನ್ಯ. ಅವರಿಂದ ಆದಷ್ಟು ದೂರ ಇರುವುದಕ್ಕೆ ಜನರು ಇಷ್ಟಪಡುತ್ತಾರೆ. ಏನಾದ್ರು ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ನಡೆದರೂ ಕೂಡ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರದೆ ಸುಮ್ಮನಾಗಿ ಬಿಡುತ್ತಾರೆ.
ಆದರೆ, ಕೆಲವೊಬ್ಬರು ವಿಚಿತ್ರ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿರುವ ಉದಾಹರಣೆಗಳಿವೆ. ಆಂಧ್ರದ ಕರ್ನೂಲ್‌ನಲ್ಲಿ ಇದೇ ರೀತಿಯ ಕುತೂಹಲಕಾರಿ ಘಟನೆ ನಡೆದಿದೆ.
ಇಲ್ಲಿ ಪೆನ್ಸಿಲ್ ಕದ್ದಿದ್ದಕ್ಕಾಗಿ 3ನೇ ತರಗತಿ ಬಾಲಕನೋರ್ವ ಶಿಕ್ಷಕರಿಗೆ ಹೇಳದೆ, ತನ್ನ ಸ್ನೇಹಿತನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಠಾಣೆಯಲ್ಲಿ ಇಬ್ಬರು ಮಕ್ಕಳ ನಡುವಿನ ಸಂಭಾಷಣೆ ಪೊಲೀಸರಿಗೆ ಒಳ್ಳೆಯ ಮನರಂಜನೆ ಕೊಟ್ಟಿದೆ. ಇದರ ವಿಡಿಯೋ ತುಣುಕನ್ನು ಆಂಧ್ರಪ್ರದೇಶ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.