ನವದೆಹಲಿ:ಬಜೆಟ್ ಅಧಿವೇಶನದ ಜಂಟಿ ಭಾಷಣದಲ್ಲಿ ಮಾತನಾಡುವಾಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರ್ಟಿಕಲ್ 370 ಮತ್ತು ರಾಮಮಂದಿರ ದೇವಾಲಯ ನಿರ್ಮಾಣದ ಆರಂಭ ಶ್ಲಾಘಿಸಿದ್ದಾರೆ.
ಇದರ ಜೊತೆಗೆ ಎಲ್ಎಸಿ ಚೀನಾದವರು ಆಕ್ರಮಿಸಿಕೊಳ್ಳಲು ಮುಂದಾಗುತ್ತಿರುವ ಹಿನ್ನೆಲೆ ಇದನ್ನು ತಡೆಯಲು ಅಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶವು ಅನೇಕ ಕಷ್ಟಗಳನ್ನು ಎದುರಿಸಿದ್ದು, ಇದನ್ನು ಸರ್ಕಾರ ತುಂಬಾ ಜಾಗರೂಕತೆಯಿಂದ ಎದುರಿಸಿದೆ. 370ನೇ ವಿಧಿಯನ್ನು ತೆಗೆದುಹಾಕಿದ್ದರಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೊಸ ಹಕ್ಕುಗಳು ದೊರೆತಿವೆ ಎಂದು ಅಧ್ಯಕ್ಷ ಕೋವಿಂದ್ ಹೇಳಿದರು.