ಕರ್ನಾಟಕ

karnataka

ETV Bharat / bharat

ಮೂರು ದಿನಗಳ ರಾಷ್ಟ್ರಪತಿ ಒಡಿಶಾ ಪ್ರವಾಸ ಆರಂಭ - Odisha News

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಮೂರು ದಿನಗಳ ಕಾಲ ಒಡಿಶಾ ಪ್ರವಾಸ ಕೈಗೊಳ್ಳಲಿದ್ದು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ) 18 ನೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Odisha
ರಾಷ್ಟ್ರಪತಿ ಒಡಿಶಾ ಪ್ರವಾಸ

By

Published : Mar 21, 2021, 7:37 AM IST

ಭುವನೇಶ್ವರ:ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಮೂರು ದಿನಗಳ ಕಾಲ ಒಡಿಶಾ ಪ್ರವಾಸ ಕೈಗೊಂಡಿದ್ದಾರೆ.

ರಾಷ್ಟ್ರಪತಿಗಳು ಇಲ್ಲಿನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಪಿಐಎ) ಬಂದಿಳಿದಿದ್ದು, ಅವರನ್ನು ಒಡಿಶಾ ಗವರ್ನರ್ ಪ್ರೊ. ಗಣೇಶ್ ಲಾಲ್, ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರತಾಪ್ ಸಾರಂಗಿ ಮತ್ತು ಒಡಿಶಾ ವಿರೋಧ ಪಕ್ಷದ ನಾಯಕ ಪ್ರದೀಪ್ತ ನಾಯಕ್ ಸ್ವಾಗತಿಸಿದರು. ಈ ಬಳಿಕ ರಾಷ್ಟ್ರಪತಿಗಳು ರಾಜ್ ಭವನ (ಗವರ್ನರ್ ಹೌಸ್)ಗೆ ತೆರಳಿದರು.

ಒಡಿಶಾದ ಮೂರು ದಿನಗಳ ಪ್ರವಾಸದಲ್ಲಿ ರಾಜ್ಯಪಾಲರೊಂದಿಗೆ ರಾಷ್ಟ್ರಪತಿಗಳು ರೂರ್ಕೆಲಾಗೆ ತೆರಳಿ, ಅಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ) 18 ನೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇದನ್ನು ಓದಿ: 8ನೇ ತರಗತಿಗೆ ಶಾಲೆ ಬಿಟ್ಟಿದ್ದವನಿಂದ ಸಿಸೇರಿಯನ್ ಹೆರಿಗೆ... ಉತ್ತರ ಪ್ರದೇಶದಲ್ಲಿ ತಾಯಿ-ಮಗು ದಾರುಣ ಸಾವು

ಎನ್‌ಐಟಿ ಸಮಾವೇಶದ ಜೊತೆಗೆ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಐಎಲ್) ಅಡಿಯಲ್ಲಿ ರೂರ್ಕೆಲಾ ಸ್ಟೀಲ್ ಪ್ಲಾಂಟ್ (ಆರ್‌ಎಸ್‌ಪಿ) ನಡೆಸುತ್ತಿರುವ ಇಸ್ಪಾತ್ ಜನರಲ್ ಆಸ್ಪತ್ರೆಯ ನವೀಕರಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು (ಐಜಿಹೆಚ್) ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸೋಮವಾರದಂದು ಬೆಳಗ್ಗೆ 11.15ಗಂಟೆಗೆ ಪುರಿ ಶ್ರೀಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸಂಜೆ 4.15 ಕ್ಕೆ ಕೊನಾರ್ಕ್ ಸೂರ್ಯ ದೇವಾಲಯ ಮತ್ತು ಐಒಎಫ್‌ಎಲ್‌ಗೆ ಭೇಟಿ ನೀಡಲಿದ್ದಾರೆ. ತಮ್ಮ ಮೂರು ದಿನಗಳ ಒಡಿಶಾ ಭೇಟಿಯನ್ನು ಮುಕ್ತಾಯಗೊಳಿಸಿ ರಾಷ್ಟ್ರಪತಿಗಳು ಸೋಮವಾರ ಸಂಜೆ 5.40 ಕ್ಕೆ ಬಿಪಿಐಎಯಿಂದ ರಾಷ್ಟ್ರ ರಾಜಧಾನಿಗೆ ತೆರಳಲಿದ್ದಾರೆ.

ABOUT THE AUTHOR

...view details