ಕರ್ನಾಟಕ

karnataka

ETV Bharat / bharat

ಅಂಧತ್ವ ತಡೆಗಟ್ಟುವಿಕೆ ಸಪ್ತಾಹ-2023: ಹೀಗೆ ಮಾಡಿದ್ರೆ ನಿಮ್ಮ ಕಣ್ಣುಗಳು ಸುರಕ್ಷಿತ! - ಪ್ರತಿವರ್ಷ 20 ಲಕ್ಷ ದೃಷ್ಟಿ ದೋಷ ಪ್ರಕರಣಗಳು

ಭಾರತ ಸರ್ಕಾರದಿಂದ ಪ್ರತಿವರ್ಷ ಏಪ್ರಿಲ್ 1ರಿಂದ 7ರವರೆಗೆ 'ಕುರುಡುತನ ತಡೆಗಟ್ಟುವಿಕೆ ವಾರ'ವನ್ನು ಆಚರಿಸಲಾಗುತ್ತದೆ. ಸಾಮಾನ್ಯ ಜನರಲ್ಲಿ ಕಣ್ಣುಗಳ ಬಗ್ಗೆ ಸರಿಯಾದ ಆರೈಕೆ, ನಿಯಮಿತ ತಪಾಸಣೆ ಮತ್ತು ಕಣ್ಣುಗಳನ್ನು ಆರೋಗ್ಯಕರವಾಗಿಡಲು ಇತರೆ ಪ್ರಮುಖ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತದೆ.

Prevention of Blindness Week
ಅಂಧತ್ವ ತಡೆಗಟ್ಟುವಿಕೆ ಸಪ್ತಾಹ ಆಚರಣೆ

By

Published : Mar 31, 2023, 9:17 PM IST

ಹೈದರಾಬಾದ್:ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಸುಮಾರು 2.2 ಶತಕೋಟಿ ಜನರು ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ದುರ್ಬಲ ದೃಷ್ಟಿ ಆರೋಗ್ಯ, ಅನುವಂಶಿಕತೆ, ಕಳಪೆ ಜೀವನಶೈಲಿ, ಆರೋಗ್ಯ ಮತ್ತು ಪರಿಸರದ ಬಗ್ಗೆ ಅಸಡ್ಡೆ ಸೇರಿದಂತೆ ಹಲವಾರು ಕಾರಣಗಳನ್ನು ಅವಲಂಬಿಸಿರುತ್ತದೆ. ಆದರೆ, ಕಣ್ಣುಗಳ ಕುರಿತು ಸರಿಯಾದ ಆರೈಕೆ ಮತ್ತು ಸಮಯೋಚಿತ ರೋಗನಿರ್ಣಯ, ಚಿಕಿತ್ಸೆಯೊಂದಿಗೆ, ದೃಷ್ಟಿ ಕೊರತೆ ಅಥವಾ ಶುಷ್ಕತೆ ಮತ್ತು ಕಣ್ಣುಗಳಲ್ಲಿ ಯಾವುದೇ ರೀತಿಯ ಅಲರ್ಜಿ, ರೆಟಿನಾಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಕಣ್ಣಿನ ಪೊರೆ ಮತ್ತು ಗ್ಲುಕೋಮಾದಂತಹ ಹೆಚ್ಚಿನ ಸಂಖ್ಯೆಯ ಸಾಮಾನ್ಯ ಕಣ್ಣಿನ ಸಮಸ್ಯೆಗಳು ಸಂಭವಿಸಬಹುದು ಎನ್ನುವುದು ವೈದ್ಯರು ಅಭಿಪ್ರಾಯ.

ನಿಯಮಿತ ತಪಾಸಣೆಯಿಂದ ಕುರುಡುತನ ಸಾಧ್ಯತೆ ಕಡಿಮೆ:ನಿಯಮಿತವಾದ ತಪಾಸಣೆಗಳಿಂದ ಕುರುಡುತನದ ಸಾಧ್ಯತೆ ಕಡಿಮೆಯಾಗಲಿದೆ. ಜೊತೆಗೆ ಗಂಭೀರ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಸರಿಯಾದ ಕಣ್ಣಿನ ಆರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರ್ಕಾರವು ಏಪ್ರಿಲ್ 1ರಿಂದ 7 ಪ್ರತಿವರ್ಷ "ಅಂಧತ್ವ ತಡೆಗಟ್ಟುವಿಕೆ ವಾರ" ಎಂದು ಆಚರಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಎಲ್ಲಾ ವಯಸ್ಸಿನ ಜನರಲ್ಲಿ ದೃಷ್ಟಿ ದುರ್ಬಲ ಅಥವಾ ದೃಷ್ಟಿ ದೋಷಗಳ ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗಿರುವುದು ಕಂಡುಬರುತ್ತದೆ.

ಆರೋಗ್ಯದ ಕಾರಣಗಳಿಂದಾಗಿ ಅಂದ್ರೆ, ವಿಶೇಷವಾಗಿ ಕಣ್ಣಿನ ಪೊರೆ ಅಥವಾ ಗ್ಲುಕೋಮಾದಂತಹ ಕಾಯಿಲೆಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಗಳು ಲಭ್ಯತೆಯ ಹೊರತಾಗಿಯೂ ಜನರಲ್ಲಿ ಕುರುಡುತನದ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಮಸ್ಯೆಯ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿರುವುದು ಹಾಗೂ ಕಣ್ಣಿನ ಆರೈಕೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಅಸಡ್ಡೆ ತೋರುವುದು ಆಗಿದೆ.

ಅಂಧತ್ವ ತಡೆಗಟ್ಟುವಿಕೆ ಸಪ್ತಾಹ:ವೈದ್ಯರ ಪ್ರಕಾರ, ''ಯಾವುದೇ ಅನುವಂಶಿಕ ಕಾರಣವಿಲ್ಲದಿದ್ದರೆ, ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಮತ್ತು ಆರೈಕೆಯೊಂದಿಗೆ, ಕುರುಡುತನದ ಅಪಾಯವನ್ನು ಕಡಿಮೆ ಮಾಡಬಹುದು. ಆದರೆ ದೃಷ್ಟಿ ದೋಷಗಳು ಅಥವಾ ದೃಷ್ಟಿ ನಷ್ಟದ ಸಮಸ್ಯೆಯನ್ನು ಸಹ ತಪ್ಪಿಸಬಹುದು. ಭಾರತ ಸರ್ಕಾರವು ಪ್ರತಿವರ್ಷ ಏಪ್ರಿಲ್1ರಿಂದ 7ರವರೆಗೆ, 'ಅಂಧತ್ವ ತಡೆಗಟ್ಟುವಿಕೆ ಸಪ್ತಾಹ'ವನ್ನು ಆಯೋಜಿಸಲಾಗುತ್ತದೆ. ಸಾಮಾನ್ಯ ಜನರಿಗೆ ನಿಯಮಿತ ಕಣ್ಣಿನ ತಪಾಸಣೆ, ಕಣ್ಣುಗಳ ಆರೋಗ್ಯ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಅರಿವು ಮೂಡಿಸುತ್ತದೆ.

ಅಂಧರ ಉನ್ನತಿ ಹಾಗೂ ಪುನರ್ವಸತಿಗೆ ಆದ್ಯತೆ:ಅಂಧತ್ವ ಸಪ್ತಾಹದ ತಡೆಗಟ್ಟುವಿಕೆ ಒಂದು ಪ್ರಮುಖ ಪ್ರಯತ್ನವಾಗಿದ್ದು, ಕಣ್ಣಿನ ಸಂಬಂಧಿತ ಸಮಸ್ಯೆಗಳ ಆರಂಭಿಕ ಲಕ್ಷಣಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಮೂಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ಜನರು ನಿಯಮಿತವಾಗಿ ಕಣ್ಣಿನ ತಪಾಸಣೆ, ಸರಿಯಾದ ಕಣ್ಣಿನ ಆರೈಕೆ ಮತ್ತು ಯಾವುದೇ ರೀತಿಯ ಸಮಸ್ಯೆಯ ಲಕ್ಷಣಗಳನ್ನು ಗುರುತಿಸಲು ಪ್ರೋತ್ಸಾಹಿಸಲಾಗುತ್ತದೆ. ರೋಗಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ತೋರದಂತೆ ಹಾಗೂ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಅದೇ ಸಮಯದಲ್ಲಿ, ಅಂಧರ ಉನ್ನತಿ ಮತ್ತು ಪುನರ್ವಸತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಕಾಳಜಿವಹಿಸಲಾಗುವುದು.

ಇಡೀ ವಾರ ಶಿಬಿರಗಳ ಆಯೋಜನೆ:ಈ ಸಪ್ತಾಹದಲ್ಲಿ ನೇತ್ರ ಆರೈಕೆ ಮತ್ತು ತಪಾಸಣೆಗೆ ಸಂಬಂಧಿಸಿದಂತೆ ಅನೇಕ ಸರ್ಕಾರಿ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇಡೀ ವಾರ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೇ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕಣ್ಣಿನ ಆರೋಗ್ಯ ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಪ್ರತಿ ವಯಸ್ಸಿನಲ್ಲೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ಸಾಮಾನ್ಯ ಜನರಿಗೆ ಮನವಿ ಮಾಡಲಾಗುತ್ತದೆ. ಇದಲ್ಲದೆ, ಹುಟ್ಟಿನಿಂದ ಅಂಧರು, ಅಪಘಾತದಲ್ಲಿ ದೃಷ್ಟಿ ಕಳೆದುಕೊಂಡವರು ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಕುರುಡರಾದ ಜನರ ಉನ್ನತಿ, ಪುನರ್ವಸತಿ ಮತ್ತು ಸಂಬಂಧಿತ ಸಮಸ್ಯೆಗಳ ಕುರಿತು ವಿಶೇಷ ಚರ್ಚೆ ಮತ್ತು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಭಾರತದಲ್ಲಿ ಪ್ರತಿವರ್ಷ 20 ಲಕ್ಷ ದೃಷ್ಟಿ ದೋಷ ಪ್ರಕರಣಗಳು:ಐಎಪಿಬಿ (ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ದಿ ಪ್ರಿವೆನ್ಶನ್ ಆಫ್ ಬ್ಲೈಂಡ್ನೆಸ್ ವಿಷನ್-ಅಟ್ಲಾಸ್)ದ ಮಾಹಿತಿಯ ಪ್ರಕಾರ, ಪ್ರಪಂಚದಾದ್ಯಂತ ಸುಮಾರು 43 ಮಿಲಿಯನ್ ಜನರು ಕುರುಡುತನದಿಂದ ಬಳಲುತ್ತಿದ್ದಾರೆ. 295 ಮಿಲಿಯನ್ ಜನರು ಮಧ್ಯಮ ಅಥವಾ ತೀವ್ರ ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಸುಮಾರು 20 ಲಕ್ಷ ದೃಷ್ಟಿ ದೋಷಗಳಿಗೆ ಸಂಬಂಧಿಸಿದ ಪ್ರಕರಣಗಳು ಪತ್ತೆಯಾಗುತ್ತವೆ. ಅದರಲ್ಲಿ ಸುಮಾರು 73 ಪ್ರತಿಶತದಷ್ಟು ಪ್ರಕರಣಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಅವುಗಳ ಚಿಕಿತ್ಸೆ ಮತ್ತು ಸಮಸ್ಯೆಗೆ ಸಂಬಂಧಿಸಿದ ಕಾಳಜಿಯನ್ನು ನಿಗದಿತ ಸಮಯಕ್ಕೆ ಪ್ರಾರಂಭಿಸಿದರೆ ಅದು ಸಮಾಧಾನದ ವಿಷಯವಾಗಿದೆ.

ವೈದ್ಯರು ಹೇಳುವುದೇನು?:ವೈದ್ಯರ ಪ್ರಕಾರ, ಕಣ್ಣಿನ ಪೊರೆ ಮತ್ತು ಗ್ಲುಕೋಮಾ ಮತ್ತು ಅಜ್ಞಾನ ಕಾರಣವು ಜಗತ್ತಿನಲ್ಲಿ ಗರಿಷ್ಠ ಅಂಧತ್ವಕ್ಕೆ ಕಾರಣವಾಗಿದೆ. ಕಳಪೆ ಜೀವನಶೈಲಿ, ವಿಶೇಷವಾಗಿ ಕಳಪೆ ಆಹಾರ, ದೃಷ್ಟಿ ಸಮಸ್ಯೆಗಳಿಗೆ ಮತ್ತು ಇತರ ಅನೇಕ ಕಣ್ಣಿನ ಸಂಬಂಧಿತ ಸಮಸ್ಯೆಗಳಿಗೆ ಕಾರಣವೆಂದು ಪರಿಗಣಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ, ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಚಿಪ್ಸ್ ಮತ್ತು ಇತರೆ ಅನೇಕ ರೀತಿಯ ಆಹಾರಗಳಂತಹ ಅನಾರೋಗ್ಯಕರ ಆಹಾರದ ಪ್ರಮಾಣವು ಜನರದಲ್ಲಿ ಹೆಚ್ಚಾಗಿದೆ. ಇದೇ ಆಹಾರ ಪದ್ಧತಿಯನ್ನು ವಿಶೇಷವಾಗಿ ಮಕ್ಕಳು ಹೆಚ್ಚು ಅನುಸರಿಸುತ್ತಾರೆ. ಇದು ದೇಹಕ್ಕೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ. ಇದರಿಂದ ಹಾನಿಯಾಗುವುದೇ ಹೆಚ್ಚು. ಈ ರೀತಿಯ ಆಹಾರವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ವಿಶೇಷವಾಗಿ ಕಣ್ಣುಗಳನ್ನು ಆರೋಗ್ಯವಾಗಿಡುದಿಲ್ಲ, ಇದು ಕಣ್ಣುಗಳನ್ನು ದುರ್ಬಲಗೊಳಿಸುವ ಅಪಾಯವನ್ನು ಹೆಚ್ಚಿಸುತ್ತದೆ.

ಕಣ್ಣುಗಳ ಆರೋಗ್ಯ ಬಗ್ಗೆ ಇರಲಿ ಕಾಳಜಿ:ಇತ್ತೀಚಿನ ವರ್ಷಗಳಲ್ಲಿ, ಟಿವಿ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಜನರ ಕಣ್ಣಿನ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇಂದಿನ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಮನರಂಜನೆ, ಅಧ್ಯಯನ ಮತ್ತು ಕೆಲಸಕ್ಕಾಗಿ ಸ್ಮಾರ್ಟ್ ಸ್ಕ್ರೀನ್ ಸಾಧನಗಳ ಮುಂದೆ ಹೆಚ್ಚು ಸಮಯ ಕಳೆಯುತ್ತಾರೆ. ಅದರಿಂದ ಹೊರಸೂಸುವ ಯುವಿ ಕಿರಣಗಳಿಂದಾಗಿ ಕಣ್ಣುಗಳು ಒಣಗುತ್ತವೆ. ದೃಷ್ಟಿ ಮಸುಕಾಗುತ್ತದೆ. ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು, ಪೋಷಕಾಂಶಗಳನ್ನು ಸೇವಿಸುವುದರ ಜೊತೆಗೆ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ:ತೂಕ ನಿರ್ವಹಣೆಗೆ ಸಿಹಿ ತ್ಯಜಿಸಬೇಡಿ; ಪರ್ಯಾಯ ಬಳಕೆ ಮಾಡಿ

ABOUT THE AUTHOR

...view details