ಕರ್ನಾಟಕ

karnataka

ETV Bharat / bharat

ಚಳಿಗಾಲದಲ್ಲಿ ನಿಮ್ಮ ತ್ವಚೆ ಕಪ್ಪಾಗುವುದನ್ನು ತಡೆಯಲು ಇಲ್ಲಿವೆ ಸುಲಭ ಮಾರ್ಗಗಳು

ಚಳಿಗಾಲದಲ್ಲಿ ಹಲವು ಕಾರಣಗಳಿಂದಾಗಿ ಚರ್ಮದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಿ ಕಳೆಗುಂದುತ್ತದೆ. ಏಕೆಂದರೆ ಈ ಋತುಮಾನದಲ್ಲಿ ಚಳಿಯ ಹಿನ್ನೆಲೆಯಲ್ಲಿ ನಾವು ಸೂರ್ಯನ ಶಾಖವನ್ನು ಹೆಚ್ಚು ಇಷ್ಟಡುತ್ತೇವೆ. ಹೀಗಾಗಿ ಬಿಸಿಲಿಗೆ ಹೆಚ್ಚು ಒಡ್ಡಿಕೊಳ್ಳುತ್ತೇವೆ. ಹಾಗಾದರೆ ತಮ್ಮ ತ್ವಚೆ ಕಪ್ಪಾಗುವುದನ್ನು ತಡೆಯಲು ಇರುವ ಮಾರ್ಗಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

winters
ಸುಲಭ ಮಾರ್ಗಗಳು

By

Published : Nov 11, 2021, 9:27 PM IST

ಚಳಿಗಾಲದ ಆರಂಭದೊಂದಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ, ಇದರಲ್ಲಿ ಚರ್ಮ ಒಣಗಿದಂತಾಗುವುದು, ಚರ್ಮ ಕಪ್ಪಾಗುವುದು ಇತ್ಯಾದಿಗಳು ಸೇರಿವೆ. ಇಷ್ಟೇ ಅಲ್ಲದೇ ಇನ್ನೂ ಹತ್ತು ಅನೇಕ ಸಮಸ್ಯೆಗಳನ್ನು ಈ ಚಳಿಗಾಲ ಹೊತ್ತು ತರುತ್ತದೆ. ಉದಾಹರಣೆಗೆ, ವಾತಾವರಣವು ತಣ್ಣಗಾದ ತಕ್ಷಣ, ನಮ್ಮ ಚರ್ಮವು ಒಣಗಲು ಪ್ರಾರಂಭಿಸುತ್ತದೆ. ನಮ್ಮ ಚರ್ಮವು ತೇವಾಂಶವನ್ನು ಹೊಂದಿರುವುದಿಲ್ಲ ಮತ್ತು ನಮ್ಮ ಚರ್ಮದ ಬಣ್ಣವು ಕಪ್ಪಾದಂತೆ ಕಾಣುತ್ತದೆ.

ಉತ್ತರಾಖಂಡ ಮೂಲದ ಚರ್ಮರೋಗ ತಜ್ಞೆ ಡಾ.ಆಶಾ ಸಕ್ಲಾನಿ ಈ ಬಗ್ಗೆ ವಿವರಿಸುತ್ತಾ ಚಳಿಗಾಲದಲ್ಲಿ, ಶೀತ ವಾತಾವರಣ ಹಿನ್ನೆಲೆಯಲ್ಲಿ ಸೂರ್ಯನ ಬಿಸಿಲು ಕಾಯಿಸಲು ಹೆಚ್ಚು ಬಯಸುತ್ತೇವೆ ಮತ್ತು ಅಸಮರ್ಪಕ ತ್ವಚೆಯು ನಮ್ಮ ಚರ್ಮವನ್ನು ತುಂಬಾ ಒಣಗಿಸುತ್ತದೆ. ಇದರಿಂದ ನಮ್ಮ ತ್ವಚೆ ಮಂದ ಮತ್ತು ಕಳೆಗುಂದಿದಂತೆ ಕಾಣುತ್ತದೆ ಮತ್ತು ನಮ್ಮ ಮೈಬಣ್ಣವು ಗಾಢವಾಗಿ ಕಾಣುತ್ತದೆ. ಅದೇ ಸಮಯದಲ್ಲಿ, ಸಾಕಷ್ಟು ನೀರನ್ನು ಕುಡಿಯದೇ ಇರುವುದು ಅಥವಾ ನಿರ್ಜಲೀಕರಣವು ನಮ್ಮ ಚರ್ಮ ಬಣ್ಣ ಬದಲಾಯಿಸಲು (Skin tone changes) ಕಾರಣವಾಗುತ್ತದೆ.ಆದ್ದರಿಂದ, ಚಳಿಗಾಲದಲ್ಲಿ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈ ಋತುವಿನಲ್ಲಿ ಕರಿದ, ಮಸಾಲೆಯುಕ್ತ ಅಥವಾ ಜಂಕ್ ಫುಡ್‌ಗಳ ಅತಿಯಾದ ಸೇವನೆಯನ್ನು ತಪ್ಪಿಸುವುದು ಅವಶ್ಯಕ ಎಂದು ಅವರು ಹೇಳುತ್ತಾರೆ. ಏಕೆಂದರೆ ಈ ರೀತಿಯ ಆಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಮೊಡವೆಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಜೊತೆಗೆ ಚರ್ಮದ ಟೋನ್ ಬದಲಾವಣೆ ಕಾರಣವಾಗುತ್ತದೆ.ಆದ್ದರಿಂದ, ಅಂತಹ ಸಮಸ್ಯೆಗಳನ್ನು ತಡೆಗಟ್ಟಲು ನೀವು ಅನುಸರಿಸಬಹುದಾದ ಕೆಲವು ಕ್ರಮಗಳು ಇಲ್ಲಿವೆ.

ನಿಮ್ಮ ದೇಹ ಹೈಡ್ರೇಟ್​ ಆಗಿರುವಂತೆ ನೋಡಿಕೊಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರು ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದು ಸರಿಯಲ್ಲ ಎನ್ನುತ್ತಾರೆ ಡಾ.ಆಶಾ.ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು, ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯ.ಒಬ್ಬರು ಪ್ರತಿದಿನ ಕನಿಷ್ಠ 8-12 ಗ್ಲಾಸ್ ನೀರನ್ನು ಸೇವಿಸಬೇಕು.ಇದಲ್ಲದೆ, ಹಣ್ಣು ಮತ್ತು ತರಕಾರಿ ಜ್ಯೂಸ್​, ಸೂಪ್ ಮತ್ತು ಇತರ ದ್ರವ ರೂಪದ ಆಹಾರ ಸೇವನೆಯನ್ನು ಸಹ ವೈದ್ಯರು ಶಿಫಾರಸು ಮಾಡುತ್ತಾರೆ.ಆದರೆ ನೆನಪಿಡಿ, ತುಂಬಾ ಬಿಸಿ ನೀರನ್ನು ಕುಡಿಯಬಾರದು.

ಸರಿಯಾದ ಚರ್ಮದ ಆರೈಕೆ ದಿನಚರಿ ಅನುಸರಿಸಿ:

ಚಳಿಗಾಲದಲ್ಲಿ ಚರ್ಮಕ್ಕೆ ಇತರ ಯಾವುದೇ ಋತುವಿಗಿಂತ ಹೆಚ್ಚಿನ ಕಾಳಜಿ ಬೇಕಾಗುತ್ತದೆ.ಆದ್ದರಿಂದ, ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಕ್ಲೆನ್ಸಿಂಗ್​, ಟೋನಿಂಗ್, ಎಫ್ಫೋಲಿಯೇಶನ್ ಮತ್ತು ಮಾಯಿಶ್ಚರೈಸೇಶನ್ ಬಗ್ಗೆ ಗಮನ ಹರಿಸಿ.ಅಲೋವೆರಾ (Alovera) ಅಥವಾ ಲೋಳೆಸರ ಜೆಲ್ ಬಳಕೆಯು ಸಹ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಆರೋಗ್ಯಕರ ಆಹಾರ ಸೇವನೆ:

ಈ ಋತುವಿನಲ್ಲಿ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸೂಪ್, ಜ್ಯೂಸ್, ಹಸಿರು ತರಕಾರಿಗಳು, ಧಾನ್ಯಗಳು, ಹಣ್ಣುಗಳು ಇತ್ಯಾದಿಗಳನ್ನು ಒಳಗೊಂಡಿರುವ ಹೆಚ್ಚು ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕು ಎಂದು ನಮ್ಮ ತಜ್ಞರು ಸೂಚಿಸುತ್ತಾರೆ.

ಕೆಫೀನ್ ಸೇವನೆಯನ್ನು ತಪ್ಪಿಸಿ:

ಚಳಿಗಾಲದಲ್ಲಿ, ಜನರು ತಮ್ಮನ್ನು ಬೆಚ್ಚಗಾಗಿಸಿ ಚಹಾ ಮತ್ತು ಕಾಫಿಯನ್ನು ಹೆಚ್ಚಾಗಿ ಸೇವಿಸಲು ಮುಂದಾಗುತ್ತಾರೆ. ಆದರೆ ಚಳಿಗಾಲದಲ್ಲಿ ಚಹಾ ಅಥವಾ ಕಾಫಿ ಅಥವಾ ಕೆಫೀನ್ (Caffeine Consumption) ಹೊಂದಿರುವ ಯಾವುದೇ ಇತರ ಪಾನೀಯಗಳ ಅತಿಯಾದ ಸೇವನೆಯನ್ನು ಈ ಋತುವಿನಲ್ಲಿ ತಪ್ಪಿಸಬೇಕು. ಕಾರಣ, ಇದರ ಹೆಚ್ಚಿನ ಸೇವನೆಯು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದ ಇತರ ಭಾಗಗಳ ಮೇಲೆ ಹಾಗೂ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.

ಆದರೂ ಯಾರಾದರೂ ಚರ್ಮದಲ್ಲಿ ತುರಿಕೆ ಚರ್ಮ ಸುಟ್ಟಂತ ಅನುಭವವಾಗುವುದು, ಚರ್ಮದ ಬಣ್ಣ ತೀವ್ರ ಬದಲಾವಣೆ ಆದಲ್ಲಿ ಯಾರೇ ಆಗಲಿ ತಕ್ಷಣ ಚರ್ಮರೋಗ ತಜ್ಞರನ್ನು (Dermatologist) ಸಂಪರ್ಕಿಸಬೇಕು ಎಂದು ಡಾ.ಆಶಾ ಸಲಹೆ ನೀಡುತ್ತಾರೆ.

ABOUT THE AUTHOR

...view details