ಸಹರಾನ್‌ಪುರ (ಯುಪಿ): ಸಹರಾನ್‌ಪುರದಲ್ಲಿ ಮತಗಟ್ಟೆ ಅಧಿಕಾರಿ ರಶೀದ್ ಅಲಿ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಬ್ಲಾಕ್ ಸರ್ಸಾವಾ ಪ್ರದೇಶದಲ್ಲಿ ಬೂತ್ 227 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉತ್ತರಪ್ರದೇಶದಲ್ಲಿ ಇಂದು ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟಾರೆ ಏಳು ಹಂತದ ವಿಧಾನಸಭಾ ಚುನಾವಣೆ ಇಲ್ಲಿ ನಡೆಯಲಿದೆ.
ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ, ಅಮ್ರೋಹಾ, ಬದೌನ್, ಬರೇಲಿ ಮತ್ತು ಶಹಜಹಾನ್‌ಪುರದ ಒಂಬತ್ತು ಜಿಲ್ಲೆಗಳಲ್ಲಿ 55 ಸ್ಥಾನಗಳಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಈ ಹಂತದಲ್ಲಿ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕೋಟಿಗೂ ಹೆಚ್ಚು ಮತದಾರರು ಇವರ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.