ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) 2022 ರ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಪರವಾಗಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಜಾರ್ಖಂಡ್‌ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರನ್ನು 2022 ರ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಎನ್‌ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕಿಳಿಯಲಿದ್ದಾರೆ.
ದ್ರೌಪದಿ ಮುರ್ಮು ಅವರ ಗೆಲುವು ಖಚಿತ ಎಂದು ನಂಬಲಾಗಿದೆ. ಅವರು ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆ ಮತ್ತು ದೇಶದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ದೇಶದಲ್ಲಿ ಈ ಹಿಂದೆ ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದ ನಂತರ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರು ಹಲವರಿದ್ದಾರೆ.
ವಿವಿ ಗಿರಿ (10 ಆಗಸ್ಟ್ 1894 - 24 ಜೂನ್ 1980) : ವಿವಿ ಗಿರಿ ಭಾರತದ ನಾಲ್ಕನೇ ರಾಷ್ಟ್ರಪತಿ. ಅವರು 10 ಆಗಸ್ಟ್ 1894 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಬ್ರಹ್ಮಪುರದಲ್ಲಿ ಜನಿಸಿದರು. ಇದೀಗ ಒಡಿಶಾದ ಭಾಗವಾಗಿದೆ. ಅವರ ತಂದೆಯ ಹೆಸರು ಶ್ರೀ ಜೋಗಿ ಪಂತುಲು ಮತ್ತು ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ವಿವಿ ಗಿರಿ ಅವರು 1937-39 ಮತ್ತು 1946-47 ರ ನಡುವೆ ಅವರು ಮದ್ರಾಸ್ ಸರ್ಕಾರದಲ್ಲಿ ಕಾರ್ಮಿಕ, ಕೈಗಾರಿಕೆ, ಸಹಕಾರ ಮತ್ತು ವಾಣಿಜ್ಯ ಇಲಾಖೆಗಳಲ್ಲಿ ಸಚಿವರಾಗಿದ್ದರು.
ಗಿರಿ ಅವರು 1 ಜುಲೈ 1960 ರಂದು ಕೇರಳದ ಎರಡನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು (1960–1965) 5 ವರ್ಷಗಳ ಕಾಲ ಕೇರಳದ ರಾಜ್ಯಪಾಲರಾಗಿದ್ದರು. ಅದರ ನಂತರ ಭಾರತದ ಮೂರನೇ ಉಪರಾಷ್ಟ್ರಪತಿಯಾಗಿ, ಅವರು 13 ಮೇ 1967 ರಂದು ಪ್ರಮಾಣವಚನ ಸ್ವೀಕರಿಸಿದರು. ಅವರು 3 ಮೇ 1969 ರವರೆಗೆ ದೇಶದ ಉಪರಾಷ್ಟ್ರಪತಿಯಾಗಿದ್ದರು. 1969 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ಭಾರತದ ಮೊದಲ ಸ್ವತಂತ್ರ ಮತ್ತು ದೇಶದ ನಾಲ್ಕನೇ ರಾಷ್ಟ್ರಪತಿ ಆಯ್ಕೆ ಆಗಿದ್ದರು.
ಶಂಕರ್ ದಯಾಳ್ ಶರ್ಮಾ (19 ಆಗಸ್ಟ್ 1918 - 26 ಡಿಸೆಂಬರ್ 1999): ಶಂಕರ್ ದಯಾಳ್ ಶರ್ಮಾ ಅವರು ದೇಶದ 9 ನೇ ರಾಷ್ಟ್ರಪತಿಯಾಗಿದ್ದರು. ಅವರು 19 ಆಗಸ್ಟ್ 1918 ರಂದು ಜನಿಸಿದರು. ಅವರು 26 ಡಿಸೆಂಬರ್ 1999 ರಂದು ನಿಧನರಾದರು. ಅವರು ಭಾರತದ 8ನೇ ಉಪರಾಷ್ಟ್ರಪತಿಯಾಗಿದ್ದರು. ಅವರು ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ಬಳಿಯ ಅಮೋನ್ ಗ್ರಾಮದಲ್ಲಿ ಜನಿಸಿದರು. ಶರ್ಮಾ ಅವರು 29 ಆಗಸ್ಟ್ 1984 ರಿಂದ 26 ನವೆಂಬರ್ 1985 ರವರೆಗೆ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.
ಇದಕ್ಕೂ ಮೊದಲು, ಅವರು 26 ನವೆಂಬರ್ 1985 ರಿಂದ 2 ಏಪ್ರಿಲ್ 1986 ರವರೆಗೆ ಪಂಜಾಬ್ ರಾಜ್ಯಪಾಲರಾಗಿದ್ದರು. ಅವರು 1952 ರಿಂದ 1956 ರವರೆಗೆ ಭೋಪಾಲ್ (ಈಗ ಮಧ್ಯಪ್ರದೇಶ) ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಶಿಕ್ಷಣ, ಕಾನೂನು ಇತ್ಯಾದಿ ಇಲಾಖೆಗಳಲ್ಲಿ ಸಾಕಷ್ಟು ಕೆಲಸ ಮಾಡಿದರು. ಅವರು 1974 ರಿಂದ 1977 ರವರೆಗೆ ದೇಶದ ಕೇಂದ್ರ ಸಂವಹನ ಸಚಿವರಾಗಿದ್ದರು. 25 ಜುಲೈ 1992 ರಿಂದ 25 ಜುಲೈ 1997 ರವರೆಗೆ ದೇಶದ ರಾಷ್ಟ್ರಪತಿಯಾಗಿ ಕರ್ತವ್ಯ ಸಲ್ಲಿಸಿದ್ದರು.