ಪುರಿ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪತ್ನಿ ಕವಿತಾ ಅವರೊಂದಿಗೆ ಇಂದು ಬೆಳಗ್ಗೆ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬೆಳಗ್ಗೆ ಶ್ರೀಮಂದಿರದಲ್ಲಿ ಪೂಜೆ ಸಲ್ಲಿಸಿದರು. ರತ್ನ ಸಿಂಹಾಸನಕ್ಕೆ ಪ್ರವೇಶಿಸುವ ಮೂಲಕ ರತ್ನ ಸಿಂಹಾಸನ ಪ್ರವೇಶಿಸಿದ ಮೊದಲ ವಿವಿಐಪಿ ಎಂಬ ಹೆಗ್ಗಳಿಕೆಗೆ ರಾಮನಾಥ್ ಕೋವಿಂದ್ ಪಾತ್ರರಾದರು. 2015 ರಿಂದ ರತ್ನ ಸಿಂಹಾಸನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇಂದು ದೇವಾಲಯಕ್ಕೆ ರಾಷ್ಟ್ರಪತಿ ಆಗಮನ ಹಿನ್ನೆಲೆ ಅವರ ಭೇಟಿಯ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ್ ದೇಬ್ ಮತ್ತು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ರಾಷ್ಟ್ರಪತಿ ಮತ್ತು ಅವರ ಕುಟುಂಬವನ್ನು ದೇವಾಲಯಕ್ಕೆ ಸ್ವಾಗತಿಸಿದರು.