ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ 'ರಾಮಾಯಣ ಸಮಾವೇಶ' ಉದ್ದೇಶಿಸಿ ಯುಪಿ ಸರ್ಕಾರ ಕೊಂಡಾಡಿದ ರಾಷ್ಟ್ರಪತಿ - amayana' to masses through art, culture

ಉತ್ತರಪ್ರದೇಶ ಸರ್ಕಾರ ಕಲೆ ಮತ್ತು ಸಂಸ್ಕೃತಿಯ ಮೂಲಕ ಸಾಮಾನ್ಯ ಜನರಿಗೂ ರಾಮಾಯಣವನ್ನು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿದರು.

President Kovind
ರಾಷ್ಟ್ರಪತಿ ರಾಮನಾಥ್ ಕೋವಿಂದ್

By

Published : Aug 29, 2021, 3:37 PM IST

ಅಯೋಧ್ಯೆ (ಉತ್ತರಪ್ರದೇಶ): ಯೋಗಿ ಸರ್ಕಾರವು ಕಲೆ ಮತ್ತು ಸಂಸ್ಕೃತಿಯ ಮೂಲಕ ರಾಮಾಯಣವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ದಾರೆ.

ಕಲೆ, ಸಂಸ್ಕೃತಿಯ ಮೂಲಕ ರಾಮಾಯಣವನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ: ರಾಷ್ಟ್ರಪತಿ

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ‘ರಾಮಾಯಣ ಸಮಾವೇಶ’ ಉದ್ದೇಶಿಸಿ ಮಾತನಾಡಿದ ಅವರು, ಉತ್ತರಪ್ರದೇಶ ಸರ್ಕಾರವು ಆರಂಭಿಸಿರುವ ಈ ಅಭಿಯಾನಕ್ಕೆ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ತಂಡವನ್ನು ಅಭಿನಂದಿಸುತ್ತೇನೆ ಎಂದರು.

ರಾಮಚರಿತಮಾನಸದ ಅತ್ಯಂತ ಜನಪ್ರಿಯವಾದ ಶ್ಲೋಕ(ಚೌಪಾಯಿ)ವನ್ನು ಉಲ್ಲೇಖಿಸಿದ ಅವರು, ‘ಇಡೀ ಜಗತ್ತನ್ನು ದೇವರೆಂದು ಭಾವಿಸಿ, ಎಲ್ಲರನ್ನೂ ಗೌರವಿಸಬೇಕು. ಸೀತಾರಾಮರು ಮನುಷ್ಯರಾಗಿದ್ದರೂ, ನಾವು ಅವರಲ್ಲಿ ದೇವರನ್ನು ಕಾಣುತ್ತೇವೆ. ಅಂತಹ ಭಗವಾನ್ ರಾಮ ಎಲ್ಲರನ್ನೂ ಇರುತ್ತಾನೆ. ನಾವು ಕಂಡುಕೊಳ್ಳಬೇಕಷ್ಟೇ’ ಎಂದು ಹೇಳಿದರು.

ರಾಮ ಕಥೆಯ ಮೂಲ ಆದರ್ಶಗಳನ್ನು ಎಲ್ಲೆಡೆ ಪ್ರಚಾರ ಮಾಡುವುದರ ಮೂಲಕ ಈ ರಾಮಾಯಣ ಸಮಾವೇಶದ ಮಹತ್ವವನ್ನು ಸಾಬೀತು ಪಡಿಸಬೇಕು. ನಮ್ಮ ನಡವಳಿಕೆಯಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ, ದೇಶಕ್ಕೆ ಮಹಾತ್ಮಗಾಂಧಿಯವರ ಕೊಡುಗೆ ಸ್ಮರಿಸಿದ ಕೋವಿಂದ್, ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಮಹಾತ್ಮ ಗಾಂಧಿಯವರು ತಮ್ಮ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಂಡಿದ್ದರು. ಅದೇ ರೀತಿ ಪ್ರತಿಯೊಬ್ಬರೂ ರಾಮನ ಆದರ್ಶನಗಳನ್ನು ಪಾಲಿಸಿದರೆ ಮರ್ಯಾದಾ ಪುರುಷೋತ್ತಮನ ಹೆಸರು ಅಜರಾಮರವಾಗುತ್ತದೆ ಎಂದರು.

ಭಗವಾನ್ ರಾಮನ ಅಂತರ್ಗ ಸಮಾಜದ ಸೃಷ್ಟಿಯು ಸಾಮರಸ್ಯ ಮತ್ತು ಏಕತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಅವನ ಆದರ್ಶಗಳು ಇಂದಿಗೂ ನಮ್ಮೆಲ್ಲರಿಗೆ ಮಾದರಿ. ರಾಮಾಯಣವು ಒಂದು ವಿಶಿಷ್ಟವಾದ ಪುಸ್ತಕವಾಗಿದ್ದು, ಮಾನವ ಜೀವನದ ಜೀವನದ ಉನ್ನತ ಆದರ್ಶಗಳು ಮತ್ತು ಮಿತಿಗಳನ್ನು ಪ್ರಸ್ತುತಪಡಿಸುತ್ತದೆ.

ರಾಮಾಯಣವನ್ನು ಸಾಮಾನ್ಯರಿಗೂ ತಲುಪಿಸಲು ಮುಂದಡಿಯಿಟ್ಟಿರುವ ಯುಪಿ ಸರ್ಕಾರದ ಹಿತದೃಷ್ಟಿ ಮಹತ್ವದ್ದಾಗಿದೆ ಎಂದರು.

ಇದನ್ನೂ ಓದಿ: 'ಆಜಾದಿ ಕಾ ಅಮೃತ್ ಮಹೋತ್ಸವ್' ಡಿಜಿಟಲ್ ಪೋಸ್ಟರ್‌ನಿಂದ ನೆಹರು ನಾಪತ್ತೆ; ಚಿದಂಬರಂ ಕಿಡಿ

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಸ್ಟ್ 26 ರಿಂದ ನಾಲ್ಕು ದಿನಗಳ ಕಾಲ ಉತ್ತರಪ್ರದೇಶ ಪ್ರವಾಸದಲ್ಲಿದ್ದಾರೆ. ನಿನ್ನೆ ಅವರು ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಮಹಾಯೋಗಿ ಗೋರಖನಾಥ ವಿಶ್ವ ವಿದ್ಯಾಲಯವನ್ನು ಉದ್ಘಾಟಿಸಿದರು.

ABOUT THE AUTHOR

...view details