ಕರ್ನಾಟಕ

karnataka

By

Published : Dec 17, 2021, 5:32 PM IST

ETV Bharat / bharat

ರಾಷ್ಟ್ರಪತಿಗಳ ಮೂರು ದಿನಗಳ ಬಾಂಗ್ಲಾ ಭೇಟಿ ಅಂತ್ಯ: ಢಾಕಾದಿಂದ ತೆರಳಿದ ರಾಮನಾಥ ಕೋವಿಂದ್​

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮೂರು ದಿನಗಳ ಬಾಂಗ್ಲಾದೇಶ ಪ್ರವಾಸ ಅಂತ್ಯಗೊಳಿಸಿದ್ದು, ಈ ಮೂರು ದಿನಗಳಲ್ಲಿ ಅಲ್ಲಿನ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದ್ದಾರೆ.

President Kovind concludes three-day Bangladesh visit
ರಾಷ್ಟ್ರಪತಿಗಳ ಬಾಂಗ್ಲಾ ಭೇಟಿ ಅಂತ್ಯ: ಢಾಕಾದಿಂದ ತೆರಳಿದ ರಾಮನಾಥ ಕೋವಿಂದ್​

ನವದೆಹಲಿ: ಮೂರು ದಿನಗಳ ಬಾಂಗ್ಲಾದೇಶ ಭೇಟಿಯನ್ನು ಪೂರ್ಣಗೊಳಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಹಿಂದಿರುಗಿದ್ದಾರೆ. ಈ ಪ್ರವಾಸದ ಸಮಯದಲ್ಲಿ, ರಾಮನಾಥ ಕೋವಿಂದ್ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸಿ, ಭಾರತ - ಬಾಂಗ್ಲಾದೇಶ ಬಾಂಧವ್ಯಕ್ಕಾಗಿ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ 'ಬಾಂಗ್ಲಾದೇಶ ವಿಮೋಚನೆಯ 50 ವರ್ಷಗಳ ಸಂಭ್ರಮಾಚರಣೆ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಐತಿಹಾಸಿಕ ಭೇಟಿ ನೀಡಿದ್ದು, ಹಲವು ದ್ವಿಪಕ್ಷೀಯ ಮಾತುಕತೆಗಳ ನಂತರ ಭಾರತಕ್ಕೆ ತೆರಳಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ರಾಷ್ಟ್ರಪತಿ ಕೋವಿಂದ್ ಅವರು ಬಾಂಗ್ಲಾದೇಶದಲ್ಲಿ 50ನೇ ವಿಜಯ್ ದಿವಸ್ ಆಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲು ಡಿಸೆಂಬರ್ 15ರಂದು ತೆರಳಿದ್ದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮೊದಲ ಬಾಂಗ್ಲಾದೇಶ ಭೇಟಿ ಇದಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಅವರ ಮೊದಲ ವಿದೇಶಿ ಪ್ರವಾಸ ಇದಾಗಿದೆ. ರಾಷ್ಟ್ರಪತಿ ಅವರೊಂದಿಗೆ ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಮತ್ತು ಸಂಸದ ರಾಜದೀಪ್ ರಾಯ್ ಕೂಡಾ ಬಾಂಗ್ಲಾದೇಶಕ್ಕೆ ತೆರಳಿದ್ದರು.

1971ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಹೋರಾಟದ ಸಂದರ್ಭದಲ್ಲಿ ಉಭಯ ದೇಶಗಳ ಜನರ ತ್ಯಾಗದ ಸಂಕೇತವಾಗಿರುವ 50ನೇ ವಾರ್ಷಿಕೋತ್ಸವದ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭೇಟಿ ಐತಿಹಾಸಿಕವಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕೃತ ಹೇಳಿಕೆ ನೀಡಿದೆ.

ಇದನ್ನೂ ಓದಿ:ಸದನದಲ್ಲಿ 'ರೇಪ್'ಹೇಳಿಕೆ ವಿವಾದ.. ಕೆ.ಆರ್‌.ರಮೇಶ್‌ ಕುಮಾರ್‌ ಅಮಾನತಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒತ್ತಾಯ

ABOUT THE AUTHOR

...view details