ನವದೆಹಲಿ: ಕರ್ನಾಟಕ ಹೈಕೋರ್ಟ್ನ ನೂತನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಮೊಹಮ್ಮದ್ ಘೌಸ್ ಶುಕುರೆ ಕಮಾಲ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ನೀಡಿದ ಮಾಹಿತಿಯಂತೆ ಮೊಹಮ್ಮದ್ ಘೌಸ್ ಶುಕುರೆ ಕಮಾಲ್ ಸುಮಾರು 23 ವರ್ಷಗಳ ಕಾಲ ಕರ್ನಾಟಕ ಹೈಕೋರ್ಟ್ ಮತ್ತು ಅದರ ಅಡಿಯಲ್ಲಿ ಬರುವ ಕೋರ್ಟ್ಗಳಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ:ಯುಪಿ ಸಿಎಂಗೆ ಪಿಂಡ ಪ್ರದಾನ: ಓರ್ವನ ಬಂಧಿಸಿದ ಪೊಲೀಸರು
ಈಗ ಸಂವಿಧಾನದ 224ನೇ ವಿಧಿ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಮೊಹಮ್ಮದ್ ಘೌಸ್ ಶುಕುರೆ ಕಮಾಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಮಾಹಿತಿ ನೀಡಿದೆ. ಕೊಡಗಿನ ಕೊಡ್ಲಿಪೇಟೆ ಮೂಲದ ಇವರು ಸಿವಿಲ್, ಕ್ರಿಮಿನಲ್, ಸಂವಿಧಾನ, ಕಾರ್ಮಿಕ, ಕಂದಾಯ ಹಾಗೂ ವಕ್ಫ್ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದಾರೆ.