ಕರ್ನಾಟಕ

karnataka

ETV Bharat / bharat

ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಶುಭಕೋರಿದ ರಾಷ್ಟ್ರಪತಿ - ಪ್ರಧಾನಿ!.. ವಿಶ್​ ಮಾಡಿದ ಸಿಎಂ - ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಎಲ್ಲಾ ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳು! ಬೆಳಕು ಮತ್ತು ಸಂತೋಷದ ಈ ಪವಿತ್ರ ಹಬ್ಬದಂದು, ಜ್ಞಾನ ಮತ್ತು ಶಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಅಗತ್ಯವಿರುವವರ ಜೀವನದಲ್ಲಿ ಸಂತೋಷವನ್ನು ತರಲು ಪ್ರಯತ್ನಿಸೋಣ ಎಂದು ರಾಷ್ಟ್ರಪತಿ ಟ್ವೀಟ್​ ಮಾಡಿದ್ದಾರೆ.

President Droupadi Murmu extends greetings on the festival
ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಶುಭಕೋರಿದ ರಾಷ್ಟ್ರಪತಿ - ಪ್ರಧಾನಿ!

By

Published : Oct 24, 2022, 8:15 AM IST

Updated : Oct 24, 2022, 8:33 AM IST

ನವದೆಹಲಿ: ದೇಶಾದ್ಯಂತ ಇಂದಿನಿಂದ ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರಿಗೆ ಗಣ್ಯರು ಶುಭ ಹಾರೈಸಿದ್ದಾರೆ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಶುಭಕಾಮನೆಗಳನ್ನು ತಿಳಿಸಿದ್ದಾರೆ.

ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮುರ್ಮು ಟ್ವೀಟ್​ ಮಾಡಿದ್ದು, ಎಲ್ಲಾ ದೇಶವಾಸಿಗಳಿಗೆ ದೀಪಾವಳಿಯ ಶುಭಾಶಯಗಳು! ಬೆಳಕು ಮತ್ತು ಸಂತೋಷದ ಈ ಪವಿತ್ರ ಹಬ್ಬದಂದು, ಜ್ಞಾನ ಮತ್ತು ಶಕ್ತಿಯ ದೀಪವನ್ನು ಬೆಳಗಿಸುವ ಮೂಲಕ ಅಗತ್ಯವಿರುವವರ ಜೀವನದಲ್ಲಿ ಸಂತೋಷವನ್ನು ತರಲು ಪ್ರಯತ್ನಿಸೋಣ. ಈ ಮಹಾನ್ ಹಬ್ಬದಂದು, ನಾನು ಎಲ್ಲಾ ದೇಶವಾಸಿಗಳ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ ರಾಷ್ಟ್ರದ ಎಲ್ಲ ಪ್ರಜೆಗಳು ಹಾಗೂ ನಾಗರಿಕರಿಗೆ ಬಣ್ಣಗಳ ಹಬ್ಬ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ದೀಪಾವಳಿಯು ಹೊಳಪು ಮತ್ತು ಕಾಂತಿಯೊಂದಿಗೆ ಸಂಬಂಧಿಸಿದೆ. ಈ ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಉತ್ಸಾಹವನ್ನು ಹೆಚ್ಚಿಸಲಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಅದ್ಭುತವಾದ ದೀಪಾವಳಿ ಸಂಭ್ರಮವನ್ನು ಪಡೆದುಕೊಂಡಿದ್ದೀರಿ ಎಂದುು ನಾನು ಭಾವಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಹಬ್ಬದ ಶುಭ ಕೋರಿದ ಬೊಮ್ಮಾಯಿ:ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು . ಸರ್ವರ ಬಾಳಲ್ಲಿ ಸಂಕಷ್ಟಗಳು ದೂರವಾಗಿ, ಸುಖ, ಶಾಂತಿಃ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ:ದೀಪದ ಬೆಳಕಲ್ಲಿ ಕಂಗೊಳಿಸಿದ ಅಯೋಧ್ಯೆ.. 14 ಲಕ್ಷ ದೀಪೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ

Last Updated : Oct 24, 2022, 8:33 AM IST

ABOUT THE AUTHOR

...view details