ಕರ್ನಾಟಕ

karnataka

ETV Bharat / bharat

ಐದು ದಿನಗಳ ಪ್ರವಾಸ ಕೈಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು - ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ

ಹೈದರಾಬಾದ್​ಗೆ ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು - ನಿರಂತರ 5 ದಿನಗಳ ಕಾಲ ಕಾರ್ಯಕ್ರಮಗಳಲ್ಲಿ ಭಾಗಿ

President Draupadi Murmu
ರಾಷ್ಟ್ರಪತಿ ದ್ರೌಪದಿ ಮುರ್ಮು

By

Published : Dec 26, 2022, 1:55 PM IST

ಹೈದರಾಬಾದ್: ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಇದೇ 30ರವರೆಗೆ ಸಿಕಂದರಾಬಾದ್‌ನ ಬೊಲ್ಲಾರಂನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಲಿದ್ದು, ಇದು ದಿನಗಳ ಕಾಲ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಭೇಟಿಗಾಗಿ ರಾಜ್ಯ ಸರ್ಕಾರ ವ್ಯಾಪಕವಾಗಿ ವ್ಯವಸ್ಥೆ ಮಾಡಿದೆ.

ವಿಶೇಷವಾಗಿ, ಚಳಿಗಾಲದ ರಜೆಗೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರಪತಿ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಕೆಸಿಆರ್ ಹಕೀಂಪೇಟೆಗೆ ತೆರಳಲಿದ್ದಾರೆ. ಸೋಮವಾರ ರಾತ್ರಿಯ ರಾಜಭವನದಲ್ಲಿ ರಾಜ್ಯಪಾಲರ ಗೌರವಾರ್ಥ ಔತಣಕೂಟದಲ್ಲಿ ಅವರು ಭಾಗವಹಿಸುವ ಸಾಧ್ಯತೆ ಇದೆ.

ರಾಷ್ಟ್ರಪತಿಗಳು ದೆಹಲಿಯಿಂದ ಭಾರತೀಯ ವಾಯುಪಡೆಯ ವಿಮಾನದಲ್ಲಿ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ನಂತರ ಹೆಲಿಕಾಪ್ಟರ್ ನಲ್ಲಿ ಶ್ರೀಶೈಲಕ್ಕೆ ತೆರಳಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭ್ರಮರಾಂಬಿಕಾ ದೇವರ ದರ್ಶನ ಮಾಡಲಿದ್ದಾರೆ.ನಂತರ ಶಿವಾಜಿ ಸ್ಫೂರ್ತಿ ಕೇಂದ್ರಕ್ಕೆ ಭೇಟಿ ನೀಡಲಿರುವ ಮುರ್ಮು ಅವರು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಕೈಗೊಂಡಿರುವ ‘ಪ್ರಸಾದ’ ಯೋಜನೆಯಡಿ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಆರಂಭಿಸಲಿದ್ದಾರೆ.

ಹಾಗೆ ಸಂಜೆ 4.15ಕ್ಕೆ ಹಕೀಂಪೇಟ್ ವಿಮಾನ ನಿಲ್ದಾಣ ತಲುಪಿ ಬೊಳ್ಳಾರಂನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ, ಬಳಿಕ ರಾಷ್ಟ್ರಪತಿಗಳ ನಿವಾಸಕ್ಕೆ ತೆರಳಲಿದ್ದಾರೆ. ಇನ್ನು ರಾತ್ರಿ 7.45ಕ್ಕೆ ರಾಜ ಭವನದಲ್ಲಿ ರಾಜ್ಯಪಾಲ ತಮಿಳಿಸೈ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂದುವರೆದು, ನಾಳೆಯ ದಿನವಾದ 27ರಂದು ಬೆಳಗ್ಗೆ 10 ಗಂಟೆಗೆ ನಾರಾಯಣಗೂಡಿನ ಕೇಶವ ಸ್ಮಾರಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರಪತಿಗಳೊಂದಿಗೆ ಮುಖಾಮುಖಿಯಲ್ಲಿ ಭಾಗವಹಿಸುತ್ತಾರೆ. ಹಾಗೆ 74ನೇ ಬ್ಯಾಚ್ ಐಪಿಎಸ್ ಪ್ರಶಿಕ್ಷಣಾರ್ಥಿಗಳು ಮಧ್ಯಾಹ್ನ 3 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಲಿದ್ದಾರೆ. ಅದರ ನಂತರ, ಅವರು ಕಂಚನ್‌ಬಾಗ್‌ನಲ್ಲಿರುವ ಮಿಶ್ರಾ ಧಾತು ನಿಗಮ್ ಲಿಮಿಟೆಡ್‌ಗೆ (ಮಿಧಾನಿ) ಭೇಟಿ ನೀಡಿವುದರ ಜೊತೆಗೆ ವಿಶಾಲವಾದ ಪ್ಲೇಟ್ ಗಿರಣಿಯನ್ನು ಪ್ರಾರಂಭಿಸುತ್ತಾರೆ.

ಇನ್ನೂ 28ರಂದು ಬೆಳಗ್ಗೆ ಹಕೀಂಪೇಟೆಯಿಂದ ರಾಜಮಹೇಂದ್ರವರಂಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಭದ್ರಾಚಲಂಗೆ ತೆರಳಿ ಸೀತಾರಾಮಚಂದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿಲಿದ್ದಾರೆ. ಪ್ರಸಾದ ಯೋಜನೆಯಡಿ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿ, ನಂತರ ಸಮಕ್ಕ ಸರಳಮ್ಮ ಜನಜಾತಿ ಪೂಜಾರಿ ಸಮ್ಮೇಳನಕ್ಕೆ ಚಾಲನೆ ನೀಡುತ್ತಾರೆ.

ಹಾಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಏಕಲವ್ಯ ಮಾದರಿ ಗುರುಕುಲ ಶಾಲೆಗಳನ್ನು ಕುಮಾರನ್ ಭೀಮ್ ಆಸಿಫಾಬಾದ್ ಮತ್ತು ಮಹಬೂಬಾಬಾದ್ ಜಿಲ್ಲೆಗಳ ಭದ್ರಾಚಲಂನಲ್ಲಿ ಪ್ರಾರಂಭಿಸಲಾಗುವುದು. ಅಲ್ಲಿಂದ ಮಧ್ಯಾಹ್ನ 2.20ಕ್ಕೆ ಹೆಲಿಕಾಪ್ಟರ್ ಮೂಲಕ ಮುಳುಗು ಜಿಲ್ಲೆಯ ರಾಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ದೇವಸ್ಥಾನದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಕಾಮೇಶ್ವರಾಲಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಂಕುಸ್ಥಾಪನೆ ನಡೆಯಲಿದೆ.

ಮುಂದೆ, 29ರಂದು ಬೆಳಗ್ಗೆ 11 ಗಂಟೆಗೆ ಜಿ.ನಾರಾಯಣಮ್ಮ ಮಹಿಳಾ ಎಂಜಿನಿಯರಿಂಗ್ ಕಾಲೇಜು, ಬಿ.ಎಂ.ಮಲಾನಿ ನರ್ಸಿಂಗ್ ಕಾಲೇಜು, ಮಹಿಳಾ ದಕ್ಷತಾ ಸಮಿತಿ ಸುಮನ್ ಜೂನಿಯರ್ ಕಾಲೇಜುಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಯಲಿದೆ. ಹಾಗೆ ಸಂಜೆ 5 ಗಂಟೆಗೆ ರಾಷ್ಟ್ರಪತಿಗಳು ಶಂಶಾಬಾದ್‌ನಲ್ಲಿರುವ ಸಮತಾಮೂರ್ತಿ ಪ್ರತಿಮೆಗೆ ಭೇಟಿ ಕೊಡಲಿದ್ದಾರೆ.

30ರಂದು ಬೆಳಗ್ಗೆ 9.30ಕ್ಕೆ ಹೆಲಿಕಾಪ್ಟರ್ ಮೂಲಕ ಯಾದಾದ್ರಿಗೆ ತೆರಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಮಧ್ಯಾಹ್ನದ ವೇಳೆಗೆ ರಾಷ್ಟ್ರಪತಿಗಳ ನಿವಾಸಕ್ಕೆ ಹಿಂತಿರುಗಿ, ಅಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಬೊಳ್ಳಾರಂನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಭೋಜನ ಕೂಟ ನಡೆಯಲಿದೆ.

ಇದನ್ನೂ ಓದಿ:ರಾಷ್ಟ್ರೀಯ ತಂಡದಲ್ಲಿ ಆಡಿದ ರಗ್ಬಿ ಆಟಗಾರ ಈಗ ಚಾಯ್​ವಾಲಾ.. ಬಿಹಾರದಲ್ಲಿ ರಗ್ಬಿ ಚಾಯ್​ ಘಮ

ABOUT THE AUTHOR

...view details