ಕರ್ನಾಟಕ

karnataka

ETV Bharat / bharat

ನಾಳೆ ರಾಮನವಮಿ.. ದೇಶಾದ್ಯಂತ ಹೀಗಿರಲಿದೆ ಆಚರಣೆ - ಭಗವಾನ್​ ಶ್ರೀರಾಮನ ಆರ್ಶೀವಾದ

ನಾಳೆ ದೇಶಾದ್ಯಂತ ರಾಮ ನವಮಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಭಗವಾನ್​ ಶ್ರೀರಾಮನ ಭಕ್ತರು ಭರದಿಂದ ಹಬ್ಬದ ಸಿದ್ಧತೆ ನಡೆಸಿದ್ದಾರೆ.

ಶ್ರೀರಾಮ ಹಾಗೂ ಸೀತಾದೇವಿ
ಶ್ರೀರಾಮ ಹಾಗೂ ಸೀತಾದೇವಿ

By

Published : Mar 29, 2023, 7:27 PM IST

ಹೈದರಾಬಾದ್ : ನಾಳೆ ದೇಶಾದ್ಯಂತ ನಡೆಯಲಿರುವ ರಾಮ ನವಮಿ 2023 ರ ಆಚರಣೆಗೆ ಶ್ರೀರಾಮನ ಭಕ್ತರು ಭರದ ಎಲ್ಲ ರೀತಿಯಿಂದ ಸಿದ್ಧರಾಗಿದ್ದಾರೆ. ಈ ದಿನವನ್ನು ಪ್ರಪಂಚದಾದ್ಯಂತ ಹಿಂದೂಗಳು ಉತ್ಸಾಹ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ವಿವಿಧ ಭಕ್ತರು ದೇವಾಲಯಗಳಿಗೆ ಹೋಗುತ್ತಾರೆ. ಅಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ ಮತ್ತು ಭಜನೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರಲ್ಲಿ ಹೆಚ್ಚಿನ ಭಕ್ತರು ರಾಮನವಮಿಯ ಈ ಹಬ್ಬದ ಸಂದರ್ಭಕ್ಕೆ ಮುಂಚಿತವಾಗಿ ತಪಸ್ಸು ಮತ್ತು ಮಂತ್ರಗಳನ್ನು ಪಠಿಸುತ್ತಾರೆ.

ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ವಿಗ್ರಹಗಳೊಂದಿಗೆ ವಿಶೇಷ ಮೆರವಣಿಗೆಗಳನ್ನು ನಡೆಸಲಾಗುತ್ತದೆ. ರಾಮ ನವಮಿ ಹಬ್ಬವು ಮುಖ್ಯವಾಗಿ ಭಗವಾನ್ ವಿಷ್ಣುವಿನ ಏಳನೇ ಅವತಾರವೆಂದು ನಂಬಲಾದ ಅಯೋಧ್ಯೆಯ ರಾಜಕುಮಾರ ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ಹಬ್ಬವನ್ನು ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನ ಆಚರಿಸಲಾಗುತ್ತದೆ.

ಸದಾಚಾರ, ಪ್ರಾಮಾಣಿಕತೆಗೆ ಹೆಸರುವಾಸಿಯಾದ ಶ್ರೀರಾಮ: ಇದರ ಭಾಗವಾಗಿ ಭಕ್ತರು ತಮ್ಮ 9 ದಿನಗಳ ಕಾಲ ನವರಾತ್ರಿಯಂದು ಉಪವಾಸವನ್ನು ಕೈಗೊಳ್ಳುತ್ತಾರೆ ಮತ್ತು ರಾಮನವಮಿ ಉತ್ಸವಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮದಲ್ಲಿ ಯುವಕರು ಮತ್ತು ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಹೊಸ ಉಡುಪುಗಳನ್ನು ಧರಿಸುತ್ತಾರೆ. ಹಿಂದೂಗಳಿಗೆ ಭಗವಾನ್ ರಾಮನು ಆದರ್ಶ ವ್ಯಕ್ತಿಯ ಸಂಕೇತವಾಗಿದ್ದಾನೆ. ಮತ್ತು ಸದಾಚಾರ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಸರುವಾಸಿಯಾದ ಕರ್ತವ್ಯನಿಷ್ಠ ಪತಿ ಅಂತಲೂ ಶ್ರೀರಾಮ ಭಕ್ತರಿಂದ ಪೂಜಸಲ್ಪಡುತ್ತಾನೆ.

ಹಬ್ಬದಂದು ಸಿಹಿತಿಂಡಿಯನ್ನು ಹಂಚುತ್ತಿರುವ ಭಕ್ತ : ಅಯೋಧ್ಯೆಯ ರಾಮಮಂದಿರದಲ್ಲಿ, ಭಕ್ತರೊಬ್ಬರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷವೂ ಶ್ರೀರಾಮನಿಗೆ 'ಪ್ರಸಾದ'ವಾಗಿ ನೀಡಲಾಗುವ ಸಿಹಿತಿಂಡಿಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದಾನೆ. ಈ ಸಿಹಿತಿಂಡಿಗಳನ್ನು ಸಟ್ಟು, ಸಕ್ಕರೆ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ. ಅವು ಹಿಂದೂ ಪವಿತ್ರ ಚಿಹ್ನೆ 'ಓಂ' ನೊಂದಿಗೆ ಬರೆಯಲ್ಪಟ್ಟಿವೆ. ಭಗವಂತನಿಗೆ ಈ ಪ್ರಸಾದ ತಯಾರಿಕೆಯಲ್ಲಿ ತೊಡಗಿದ್ದಕ್ಕಾಗಿ ತಮ್ಮ ಕುಟುಂಬವನ್ನು ಗೌರವಿಸಲಾಗಿದೆ ಎಂದು ಆ ಭಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ ನವಮಿ ಮದುವೆ ಸಮಾರಂಭ ನಡೆಸಲು ಮಂಗಳಕರ: ಸಾಂಪ್ರದಾಯಿಕವಾಗಿ ದಕ್ಷಿಣ ಭಾರತದ ಭಕ್ತರು ಶ್ರೀರಾಮ ನವಮಿಯನ್ನು ಮದುವೆ-ಸಮಾರಂಭಗಳನ್ನು ನಡೆಸಲು ಮಂಗಳಕರವೆಂದು ಪರಿಗಣಿಸುತ್ತಾರೆ. ಶ್ರೀರಾಮ ನವಮಿಯ ದಿನದಂದು ಶ್ರೀರಾಮನು ಸೀತಾದೇವಿಯನ್ನು ವಿವಾಹವಾದನೆಂದು ಅವರು ನಂಬುತ್ತಾರೆ ಮತ್ತು ಶ್ರೀಸೀತಾರಾಮ ಕಲ್ಯಾಣವನ್ನು (ರಾಮ ಮತ್ತು ಸೀತಾ ವಿವಾಹ) ದೇವಾಲಯಗಳು ಮತ್ತು ಬೀದಿಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಭಗವಾನ್​ ಶ್ರೀರಾಮನ ಆಶೀರ್ವಾದಕ್ಕೆ ಪಾತ್ರರಾಗಲಿರುವ ಭಕ್ತರು: ಅದರಲ್ಲಿಯೂ ಹಿಂದೂ ಪುರಾಣಗಳ ಪ್ರಕಾರ, ಶ್ರೀರಾಮಚಂದ್ರ ಮಹಾವಿಷ್ಣುವಿನ ಏಳನೇ ಅವತಾರ ಎಂದು ನಂಬಲಾಗಿದೆ. ಈ ಬಾರಿ ರಾಮನವಮಿ ಗುರುವಾರದಂದೇ ಬಂದಿದೆ. ಗುರುವಾರ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ವಾರ. ಹೀಗಾಗಿ ಭಕ್ತರಲ್ಲಿನ ಉತ್ಸಾಹ ಇಮ್ಮಡಿಯಾಗಿದೆ. ಈ ದಿನದಂದು ಎಲ್ಲಾ ಭಕ್ತರು ತಮ್ಮ ಮನೆಗಳಲ್ಲಿ ಭಗವಾನ್ ಶ್ರೀರಾಮನನ್ನು ಸ್ತುತಿಸುತ್ತಾ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ ಭಗವಂತನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.

ಇದನ್ನೂ ಓದಿ :ಸ್ತ್ರೀ ರೂಪದಲ್ಲಿ ಹಬ್ಬ ಆಚರಿಸುವ ಪುರುಷರು... ಈ ದೇವಸ್ಥಾನದಲ್ಲಿದೆ ವಿಶಿಷ್ಟ ಆಚರಣೆ!

ABOUT THE AUTHOR

...view details