ಅಯೋಧ್ಯಾ: ತಿರುಪತಿಯ ಬಾಲಾಜಿ ಬಳಿಕ ಇದೀಗ ಅಯೋಧ್ಯಾದಲ್ಲಿನ ಹನುಮಗರ್ಹಿ ಲಡ್ಡು, ಭೌಗೋಳಿಕ ಸೂಚಕ (ಜಿಐ) ಟ್ಯಾಗ್ಗೆ ನೋಂದಣಿ ಪಡೆದಿದೆ. ಜಿಐ ಟ್ಯಾಗ್ ಎಂಬುದು ಒಂದು ವಸ್ತುವಿನ ಅಥವಾ ಸಾಮಗ್ರಿಯ ಮೂಲವನ್ನು ನಿರ್ದಿಷ್ಟವಾಗಿ ಒಂದು ಭೌಗೋಳಿಕ ಸ್ಥಳಕ್ಕೆ (ಕ್ಷೇತ್ರ, ಜಾಗ, ಊರು, ದೇಶ) ಗುರುತಿಸುವ ವಿಧಾನ ಆಗಿದೆ. ಇದು ಇತರ ಉತ್ಪನ್ನಗಳಿಗಿಂತ ನಿರ್ದಿಷ್ಟತೆ ಮೂಲಕ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ಜಿಐ ಟ್ಯಾಗ್ ಅನ್ನು ಯಾವುದೇ ಉತ್ಪನ್ನ ಅಥವಾ ಸಂಘಟನೆಗಳು ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. 2003ರಲ್ಲಿ ಸೆಪ್ಟೆಂಬರ್ 15ರಲ್ಲಿ ಡಾರ್ಜಲಿಂಗ್ ಚಹಾವೂ ಮೊದಲ ಬಾರಿಗೆ ಭಾರತದಲ್ಲಿ ಜಿಐ ಟ್ಯಾಗ್ ಪಡೆದ ಬಳಿಕ ಇದು ಹೆಚ್ಚು ಪ್ರಚಾರಕ್ಕೆ ಬಂದಿದೆ.
ಇದೀಗ ಈ ಜಿಐ ಟ್ಯಾಗ್ಗೆ ಹನುಮಗರ್ಹಿ ಲಡ್ಡು ದಾಖಲಾಗಿದ್ದು, ಈ ಸಂಬಂಧ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ಸರ್ಕಾರದ ಈ ಪ್ರಯತ್ನಕ್ಕೆ ಭಕ್ತರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಹನುಮಗರ್ಹಿ ಲಡ್ಡುಗೆ ಜಿಐ ಟ್ಯಾಗ್ಗೆ ನೋಂದಣಿ ಆಗಿರುವುದು ಸಂತಸದ ವಿಚಾರವಾಗಿದೆ ಎಂದಿದ್ದಾರೆ
ಏನಿದರ ವಿಶೇಷತೆ: ಹನುಮಗರ್ಹಿ ಲಡ್ಡು ಹಲವು ವರ್ಷಗಳಿಂದ ಇಲ್ಲಿ ಪ್ರಖ್ಯಾತವಾಗಿದೆ. ಇಲ್ಲಿನ ಲಡ್ಡು ಪಡೆಯಲು ಜನರು ದೂರದೂರಿಗಳಿಂದ ಬರುತ್ತಾರೆ . ಹನುಮಗರ್ಹಿ ಲಡ್ಡುವೂ ಇತರ ಲಡ್ಡುವಿನಂತೆ ಅಲ್ಲದೇ, ಅದನ್ನು ತಯಾರಿಸುವ ವಿಧಾನ ಬೇರೆ ಆಗಿದೆ. ಸ್ಥಳೀಯ ಉತ್ಪನ್ನಗಳಾದ ಕಡಲೆ ಹಿಟ್ಟು ಮತ್ತು ದೇಸಿ ತುಪ್ಪದಿಂದ ಇದನ್ನು ಕೈಯಲ್ಲಿ ತಯಾರಿಸಲಾಗುತ್ತದೆ. ಈ ಲಡ್ಡು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಲಡ್ಡು ತಯಾರಿಕೆ ಪ್ರಕ್ರಿಯೆಯಲ್ಲಿ 200 ಅಯೋಧ್ಯಾ ನಿವಾಸಿಗಳು ನಿರತರಾಗಿದ್ದಾರೆ. ಒಂದೇ ಗಾತ್ರದಲ್ಲಿ ಒಂದೇ ಆಕಾರದಲ್ಲಿ ಇದನ್ನು ಕಾಣಬಹುದು. ಇಲ್ಲಿ ನಿತ್ಯ 20 ರಿಂದ 25 ಕ್ವಿಂಟಾಲ್ ಲಡ್ಡು ತಯಾರಿಸಲಾಗುತ್ತದೆ.