ಜಲಂಧರ್(ಪಂಜಾಬ್):ಹುಟ್ಟು - ಸಾವು ದೇವರ ಕೈಯಲ್ಲಿದೆ ಎಂದು ಹೇಳಲಾಗ್ತಿದೆ. ಜನನ ಮತ್ತು ಮರಣದ ಸ್ಥಳವನ್ನ ಆತನೇ ನಿರ್ಧಾರ ಮಾಡ್ತಾನೆ. ಇಂತಹ ಪ್ರಕರಣವೊಂದು ಪಂಜಾಬ್ನ ಫಗ್ವಾರಾದಲ್ಲಿ ಬೆಳಕಿಗೆ ಬಂದಿದ್ದು, ಬಸ್ನಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹಿಳೆಯನ್ನ ಲೂಧಿಯಾನದ ನಿವಾಸಿ ಅಶ್ವಿರ್ ಎಂದು ಗುರುತಿಸಲಾಗಿದೆ.
ಗರ್ಭಿಣಿ ಸರ್ಕಾರಿ ಬಸ್ನಲ್ಲಿ ಜಲಂಧರ್ನಿಂದ ಲೂಧಿಯಾನಕ್ಕೆ ತೆರಳುತ್ತಿದ್ದರು. ಈ ವೇಳೆ ಬಸ್ನಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಾರ್ಗ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದೃಷ್ಟವಶಾತ್ ಬಸ್ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರಣ, ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಸಹಾಯ ಮಾಡಿದ್ದಾರೆ.