ಕರ್ನಾಟಕ

karnataka

ETV Bharat / bharat

ಹತ್ತಾರು ಆಸ್ಪತ್ರೆ ಅಲೆದರೂ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು.. ಅಂತ್ಯಸಂಸ್ಕಾರಕ್ಕೂ ನಕಾರ.. - ಹೆರಿಗೆ ನೋವಿನಿಂದ ಗರ್ಭಿಣಿ ಸಾವು

ಕೊನೆಗೆ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಗು ಮತ್ತು ತಾಯಿಯನ್ನು ಬೇರ್ಪಡಿಸಿ, ಅಂತ್ಯಕ್ರಿಯೆಗೆ ನೆರವಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೆಡ್ಚಲ್ - ಮಲ್ಕಜ್​ಗಿರಿ ಜಿಲ್ಲಾಧಿಕಾರಿ ಶ್ವೇತಾ ಮೊಹಂತಿ ತನಿಖೆಗೆ ಆದೇಶಿಸಿದ್ದಾರೆ..

admission
admission

By

Published : May 15, 2021, 10:41 PM IST

ಹೈದರಾಬಾದ್ :ಹೆರಿಗೆ ನೋವು ಕಾಣಿಸಿಕೊಂಡು ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ, ಯಾವೊಂದು ಆಸ್ಪತ್ರೆಯೂ ದಾಖಲಿಸಿಕೊಳ್ಳದ ಕಾರಣ ಗರ್ಭಿಣಿ ಮೃತಪಟ್ಟಿರುವ ಅಮಾನವೀಯ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ‘

ನಗರದ ಮಲ್ಲಾಪುರದ ನಿವಾಸಿ ಪಾವನಿ ಮೃತ ದುರ್ದೈವಿಯಾಗಿದ್ದಾಳೆ. ಕೋವಿಡ್ ಭೀತಿಯಿಂದ ಗರ್ಭಿಣಿ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗ್ತಿದೆ.

ಶವಸಂಸ್ಕಾರಕ್ಕೆ ನಕಾರ:ಪಾವನಿ ಗರ್ಭಿಣಿಯಾಗಿದ್ದರಿಂದ ಅನೇಕ ಸ್ಮಶಾನಗಳು ಅಂತ್ಯಕ್ರಿಯೆಗೆ ನಿರಾಕರಿಸಿದರು. ತಾಯಿ ಮತ್ತು ಮಗುವನ್ನು ಬೇರ್ಪಡಿಸಿದರೆ ಮಾತ್ರ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಸ್ಮಶಾನದ ಸಿಬ್ಬಂದಿ ಹೇಳಿದ್ದಾರೆ.

ದಿಕ್ಕು ತೋಚದೆ ಇದಕ್ಕೆ ಒಪ್ಪಿದ ಪೋಷಕರು ಮೃತದೇಹ ಹೊತ್ತು ಹಲವಾರು ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ, ಯಾರೊಬ್ಬ ವೈದ್ಯರು ಈ ಕಾರ್ಯ ಮಾಡಲು ಮುಂದಾಗಿಲ್ಲ.

ಕೊನೆಗೆ ಸ್ಥಳೀಯ ಆಸ್ಪತ್ರೆಯ ವೈದ್ಯರು ಮಗು ಮತ್ತು ತಾಯಿಯನ್ನು ಬೇರ್ಪಡಿಸಿ, ಅಂತ್ಯಕ್ರಿಯೆಗೆ ನೆರವಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಮೆಡ್ಚಲ್ - ಮಲ್ಕಜ್​ಗಿರಿ ಜಿಲ್ಲಾಧಿಕಾರಿ ಶ್ವೇತಾ ಮೊಹಂತಿ ತನಿಖೆಗೆ ಆದೇಶಿಸಿದ್ದಾರೆ.

ABOUT THE AUTHOR

...view details