ಪಿಲಿಫಿತ್(ಉತ್ತರಪ್ರದೇಶ):ಗರ್ಭಿಣಿ ಮತ್ತು ಆಕೆಯ ಐದು ವರ್ಷದ ಮಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶ ಪಿಲಿಭಿತ್ ನಗರದ ಸುಂಗದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬರ್ಹಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದ್ದು, ಗರ್ಭಿಣಿ ಸೀಮಾ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ, ಹೊರಗೆ ಆಟವಾಡುತ್ತಿದ್ದ ಆಕೆಯ ಮೂವರು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಆಕೆ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾಳೆ.
ಐದು ವರ್ಷದ ಮಗಳ ಮೇಲೆ ಸುಮಾರು 6 ಬೀದಿನಾಯಿಗಳು ಮತ್ತು ಮತ್ತೆರಡು ನಾಯಿಗಳು ಗಂಡುಮಕ್ಕಳಾದ ಹತ್ತು ವರ್ಷದ ಅನುಜ್ ಮತ್ತು ಮೂರು ವರ್ಷದ ಮೋನು ಮೇಲೆ ದಾಳಿ ಮಾಡಿವೆ. ಇದನ್ನು ಕಂಡು ಸೀಮಾ ಏಕಾಂಗಿಯಾಗಿ ಹೋರಾಡಿ ನಾಯಿಗಳನ್ನು ಅಲ್ಲಿಂದ ಓಡಿಸಿದ್ದಾಳೆ.