ಕರ್ನಾಟಕ

karnataka

ETV Bharat / bharat

ಲಿವ್​ ಇನ್​ ರಿಲೇಶನ್​ ಶಿಪ್: ಇಸ್ಲಾಂಗೆ ಮತಾಂತರ ಒತ್ತಡ, ಗರ್ಭಿಣಿ ಸಾವು; ಇಬ್ಬರ ಬಂಧನ - ಈಟಿವಿ ಭಾರತ ಕನ್ನಡ

ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಬಲವಂತ ಮಾಡಿದ್ದಕ್ಕೆ ಲಿವಿ ಇನ್​ ರಿಲೇಶನ್​ ಶಿಪ್​ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗರ್ಭಿಣಿ ಸಾವು
ಗರ್ಭಿಣಿ ಸಾವು

By

Published : May 29, 2023, 1:59 PM IST

ಶಹಜಾನ್​ಪುರ (ಯುಪಿ):ಗರ್ಭಿಣಿಯಾದ ನಂತರ ಸಂಗಾತಿಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಪ್ರಿಯಕರ ತೀವ್ರ ಒತ್ತಡ ಹೇರಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೀಮಾ ಗೌತಮ್ (24) ಮೃತ ಮಹಿಳೆ. ನಾವೇದ್ ಮತ್ತು ಫರ್ಹಾನ್ ಬಂಧಿತರು. ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ಮಾಹಿತಿ ನೀಡಿದ್ದಾರೆ. ಲಖಿಂಪುರ ಖೇರಿ ನಿವಾಸಿ ಮೃತ ಸೀಮಾ ಅವರು ನಾವೇದ್ ಜೊತೆ ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದರು. ಇಬ್ಬರು ಜಿಲ್ಲೆಯ ರೋಜಾ ಪ್ರದೇಶದ ಮುಸ್ತಾಕಿಮ್ ಎಂಬುವವರ ನಿವಾಸದಲ್ಲಿ ಮನೆ ಬಾಡಿಗೆ ಪಡೆದು ವಾಸಿಸುತ್ತಿದ್ದರು.

ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೀಮಾರನ್ನು ನಾವೇದ್ ಮತ್ತು ಫರ್ಹಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆ ದಾಖಲಾತಿ ಸಮಯದಲ್ಲಿ ಆರೋಪಿ ನಾವೇದ್ ತನ್ನ ಪತ್ನಿ ಜೋಯಾ ಸಿದ್ದಿಕಿ ಎಂದು ದಾಖಲಿಸಿದ್ದಾರೆ. ನಂತರ ಗರ್ಭಿಣಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನು ತಿಳಿದ ಆರೋಪಿತರಿಬ್ಬರು ಪೊಲೀಸರು ಬರುವ ಮೊದಲು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ಪೊಲೀಸರು ತನಿಖೆ ನಡೆಸಿದ ವೇಳೆ, ಸೀಮಾ ಮತ್ತು ನಾವೇದ್ ಇಬ್ಬರು ಕಳೆದ ಒಂದೂವರೆ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಮಹಿಳೆ ಗರ್ಭಿಣಿಯಾಗಿದ್ದರು. ಬಂಧಿತರು ಮಹಿಳೆಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ತೀವ್ರ ಒತ್ತಡ ಹೇರಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಹೇಳಿದ್ದಾರೆ.

ಮೃತಳ ಸಹೋದರ ನೀಡಿದ ದೂರಿನ ಆಧಾರದ ಮೇಲೆ ನಾವೇದ್, ಮುಸ್ತಾಕಿಮ್ ಮತ್ತು ಫರ್ಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ನಾವೇದ್ ಮತ್ತು ಫರ್ಹಾನ್​ನ​ನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಮುಸ್ತಾಕಿಮ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ:ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ನಡೆದ ಪ್ರಕರಣವೊಂದರಲ್ಲಿಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಮತಾಂತರಗೊಳಿಸಿ ಮದುವೆಯಾಗಿ ಬಳಿಕ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶ ಮೂಲದ ಸಂತ್ರಸ್ತೆ ಬಿಹಾರದ ಈಸ್ಟ್​ ಚಂಪಾರನ್​ ಜಿಲ್ಲೆಯ ಬೆಲ್ವಾಟಿಯಾ ಗ್ರಾಮದ ತಾಲೀಫ್​ ರೆಜಾ ಎಂಬಾತನ ಮನೆ ಮುಂದೆ ನ್ಯಾಯಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದ್ದರು.

ನೋಯ್ಡಾದಲ್ಲಿ ಕೋಚಿಂಗ್​ ಸೆಂಟರ್​ನಲ್ಲಿ ಸಂತ್ರಸ್ತ ಯುವತಿಗೆ ತಾಲೀಫ್ ಎಂಬಾತನ ಪರಿಚಯವಾಗಿರುತ್ತದೆ. ​​ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ತಾಲೀಫ್​ ಬಳಿಕ ಯುವತಿಯನ್ನು ಕರೆಸಿಕೊಂಡಿದ್ದ. ಆತನ ಮಾತು ನಂಬಿ ದುಬೈಗೆ ತೆರಳಿದ ಸಂತ್ರಸ್ತ ಯುವತಿಗೆ ಮದುವೆಯಾಗಬೇಕಾದರೆ ಇಸ್ಲಾಂಗೆ ಮತಾಂತರ ಆಗಬೇಕು. ಆಗ ಮಾತ್ರ ನನ್ನ ಮನೆಯವರು ನಿನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದ. ಮದುವೆಯಾದ ಬಳಿಕ ಇಬ್ಬರೂ ದುಬೈನಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದೆವು. ಒಂದು ದಿನ ಇದ್ದಕ್ಕಿದ್ದಂತೆ ಆರೋಪಿ ದುಬೈನಿಂದ​ ಪರಾರಿಯಾಗಿ ತನ್ನ ಹುಟ್ಟೂರು ಬಿಹಾರದ ಮೋತಿಹಾರಿಗೆ ವಾಪಸಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ಮಾಧ್ಯಮಕ್ಕೆ ಹೇಳಿದ್ದರು.

ಇದನ್ನೂ ಓದಿ:ಅಸ್ಸಾಂನಲ್ಲಿ ಭೀಕರ ರಸ್ತೆ ಅಪಘಾತ: 7 ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಸಾವು

ABOUT THE AUTHOR

...view details