ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಸದ್ಯ ನವದೆಹಲಿ ವೈದ್ಯೆಯೊಬ್ಬರು ಡೆಡ್ಲಿ ವೈರಸ್ಗೆ ಬಲಿಯಾಗಿದ್ದಾರೆ.
34 ವರ್ಷದ ವೈದ್ಯೆ ಡಾ. ಡಿಂಪಲ್ ಅರೊರಾ ಚಾವ್ಲಾ ಸೋಂಕಿನಿಂದ ಸಾವನ್ನಪ್ಪಿರುವ 7 ತಿಂಗಳ ಗರ್ಭಿಣಿ. ಏಪ್ರಿಲ್ 10ರಂದು ಕೋವಿಡ್ ಸೋಂಕಿಗೊಳಗಾಗಿದ್ದ ವೈದ್ಯೆ ಏಳು ತಿಂಗಳ ಗರ್ಭಿಣಿಯಾಗಿದ್ದರು. ತೀವ್ರ ಉಸಿರಾಟದ ತೊಂದರೆ ಕಾರಣ ಏಪ್ರಿಲ್ 21ರಂದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 25ರಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಕೋವಿಡ್ ಸೋಂಕು ಇದ್ದ ಕಾರಣ, ಉಸಿರಾಟದ ತೊಂದರೆಗೊಳಗಾಗಿ ಗರ್ಭದಲ್ಲೇ ಮಗು ಸಹ ಕಳೆದಕೊಂಡಿದ್ದರು. ಇಷ್ಟಾದರೂ ಕೂಡ ಮಹಾಮಾರಿ ವಿರುದ್ಧ ಹೋರಾಟ ನಡೆಸಿದ್ದ ಅವರ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲ. ಹೀಗಾಗಿ ಇಹಲೋಕ ತ್ಯಜಿಸಿದ್ದಾರೆ.